ಆಗಸ್ಟ್ 2ರಂದು ನೃತ್ಯ ಕಲಾವಿದರ ವಾರ್ಷಿಕೋತ್ಸವ ಹಾಗೂ ಪದಗ್ರಹಣ

ವಿಟ್ಲ: ನೃತ್ಯ ಕಲಾವಿದರಿಗೆ ಹಾಗೂ ಕಲಾರಸಿಕರಿಗೆ ಸಂತಸದ ಸುದ್ದಿ. ನೃತ್ಯ ಕಲಾವಿದರ ಒಕ್ಕೂಟ (ರಿ.), ದಕ್ಷಿಣ ಕನ್ನಡ ವತಿಯಿಂದ “ವಾರ್ಷಿಕ ಸಂಭ್ರಮ, ಕ್ರೀಡಾಕೂಟ ಮತ್ತು ಪದಗ್ರಹಣ ಸಮಾರಂಭ – 2026-27” ಕಾರ್ಯಕ್ರಮವನ್ನು ಆಗಸ್ಟ್ 2ರಂದು ಆಯೋಜಿಸಲಾಗಿದೆ.

ಕಾರ್ಯಕ್ರಮವು ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಜೇಸಿಸ್ ಪೇವಿಲಿಯನ್ ಹಾಲ್ನಲ್ಲಿ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದ್ದು, ಸಂಜೆ 2.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾರ್ಷಿಕ ಸಮಾರಂಭ ನಡೆಯಲಿದೆ.

ಈ ಸಮಾರಂಭದಲ್ಲಿ ನೃತ್ಯ ಕಲಾವಿದರಿಗೆ ಮತ್ತು ಗೋಂಬೆ ಕಲಾವಿದರಿಗೆ ಉಚಿತ ಜೀವವಿಮೆಯನ್ನು ಕೂಡ ನೀಡಲಾಗುವುದು ಎಂಬುದು ವಿಶೇಷ.

ಆಸಕ್ತ ಕಲಾವಿದರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ನೃತ್ಯ ಕಲಾವಿದರ ಒಕ್ಕೂಟ (ರಿ.), ದಕ್ಷಿಣ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!