ದೇವನೊಬ್ಬ ನಾಮ ಹಲವು ಎಂಬುದ ತಿಳಿದು ಬದುಕಿರಿ
ಜಾತಿ ಮತ ಹಲವಿಹುದು ಕುಲವೊಂದೇ ಎಂದು ನಂಬಿರಿ
ದೇಹಾಕೃತಿ ವ್ಯತ್ಯಾಸ ಹರಿವ ರಕ್ತ ಒಂದೇ ಅಗಿದೆ ತಿಳಿಯಿರಿ
ಬದುಕು ಬಹುವಿದ ಜೀವದುಸಿರು ಸಮಾನವೆಂದು ಬಾಳಿರಿ
ಭೇದ ಭಾವವ ತೋರುತಾ ಮನದಲಿ ಕಲ್ಮಶವ ತುಂಬದಿರಿ
ದ್ವೇಷ ಅಸೂಯೆಯಿಂದ ಬೆರೆತ ಬದುಕು ನಾಶ ಮಾಡದಿರಿ
ಮೇಲು ಕೀಳೆoದು ವ್ಯರ್ಥ ಕಿತ್ತಾಡಿ ಕುಲ ಜಗಳ ಗೈಯ್ಯದಿರಿ
ಪಡೆದು ಬಂದ ಜೀವನದ ಪುಟಗಳನು ಸಾರ್ಥಕ ಗೊಳಿಸಿರಿ
ಬರುವಾಗ ಕತ್ತಲೆ ಹೋಗುವಾಗ ಬೆತ್ತಲೆ ನಿಜ ಮರೆಯದಿರಿ
ಹುಟ್ಟುವುದು ಆಕಸ್ಮಿಕ ಸಾವು ಶಾಶ್ವತ ಎಂಬುದನು ತಿಳಿದಿರಿ
ಹುಟ್ಟು ಸಾವಿನ ನಡುವಿನ ಬಾಳನು ಅರಿತು ಸೇರಿ ಜೀವಿಸಿರಿ
ಮನುಜರೆಲ್ಲಾ ಒಂದೇ ಎಂದು ತಿಳಿದು ಸಂತಸದಿoದ ಬಾಳಿರಿ

ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ




