ವಿಶ್ವ ತುಳುವೆರ್ (ರಿ) ಕೇರಳ ಘಟಕ ಉದ್ಘಾಟನಾ ಸಮಾರಂಭ

ವಿಶ್ವ ತುಳುವೆರ್ (ರಿ) ಕೇರಳ ಘಟಕ ಇದರ ಉದ್ಘಾಟನಾ ಸಮಾರಂಭ, ಪದಾಧಿಕಾರಿಗಳ ಪದಗ್ರಹಣ ಮತ್ತು ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇದರ 236ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಆಗಸ್ಟ್ 2ರಂದು ಡಾ. ವಾಣಿಶ್ರೀ ಕಾಸರಗೋಡು ಇವರ ಸ್ವಗೃಹ ಶ್ರೀಗಿರಿ ಸದನ “ಪ್ರಕೃತಿ ಆಯುರ್ವೇದ ಆಸ್ಪತ್ರೆ “ಯ ಶಿವದುರ್ಗಾ ಕಲಾ ವೇದಿಕೆಯಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ತುಳುವೆರ್ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಡಾ. ಗಣೇಶ್ ಕುಮಾರ್ ವಹಿಸಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಶ್ವ ತುಳುವೆರ್ (ರಿ) ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಶ್ರೀ ದಯಾನಂದ ಮಂಗಳೂರು ಇವರು ತುಳು ಭಾಷೆ, ಸಂಸ್ಕೃತಿ ಯ ಉಳಿವಿಗಾಗಿ ನಾವೆಲ್ಲರೂ ಸಮಾನ ಮನಸ್ಕರಾಗಿ ದುಡಿಯಬೇಕು. ಭಾಷೆಯ ಉಗಮ, ಲಿಪಿಯ ಇತಿಹಾಸವನ್ನು ತಿಳಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ವಿಶ್ವ ತುಳುವೆರ್ (ರಿ) ಕೇರಳ ಘಟಕದ ಗೌರವಾಧ್ಯಕ್ಷರಾಗಿ ಡಾ ವೆಂಕಟಗಿರೀಶ್, ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸುರೇಶ್ ಉಡುಪಿ ಉಪಾಧ್ಯಕ್ಷರಾಗಿ ಶ್ರೀ ಸೀತಾರಾಮ ಮಲ್ಲ, ಶ್ರೀ ಅಚ್ಚುತ ಭಟ್, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಜಯಂತಿ ಮತ್ತು ಸೌಮ್ಯ ಮಲ್ಲ ಹಾಗೂ ಸದಸ್ಯರಾಗಿ ರೋಹಿತ್ ಮಲ್ಲ ಅಧಿಕಾರ ಸ್ವೀಕರಿಸಿದರು


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇದರ ಸುಮಾರು 40ಕ್ಕೂ ಅಧಿಕ ಕಲಾವಿದರಿಂದ ವಿವಿಧ ನೃತ್ಯ ಗಾಯನ ಕಾರ್ಯಕ್ರಮಗಳು ನೆರೆದ ಸಭಿಕರನ್ನು ಮಂತ್ರ ಮುಗ್ಧಗೊಳಿಸಿತು. ಇದೇ ವೇದಿಕೆಯಲ್ಲಿ ಸಂಘಕ್ಕೆ ನೂತನವಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಶ್ರೀ ಸುರೇಶ್ ಉಡುಪಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಸಂಘದ ಬಾಲ ಕಲಾವಿದರಾದ ಮೋಕ್ಷ, ಮುಕ್ತಿ ಮತ್ತು ಹರ್ಷಿಶ್,ಇವರ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ವೇದಿಕೆಯಲ್ಲಿ ಆಚರಿಸಲಾಯಿತು. ಸಂಘದ ಅಸ್ಮಿತೆಯಾದ ಶಿವದುರ್ಗಾ ವೇದಿಕೆಯನ್ನು ವಿನ್ಯಾಸಗೊಳಿಸಿದ ಶ್ರೀ ರತ್ನಾಕರ ಇವರನ್ನು ಗುರುತಿಸಲಾಯಿತು.

ವೇದಿಕೆಯಲ್ಲಿ ವಿಶ್ವ ತುಳುವೆರ್ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ಜಿ.ವಿ.ಎಸ್ ಉಲ್ಲಾಳ್, ಅಧ್ಯಕ್ಷರಾದ ಶ್ರೀ ಪ್ರಕಾಶ್ ಸಿಂಫೊನಿ ಸದಸ್ಯರಾದ ಶ್ರೀ ಗಣೇಶ್ ಬಲ್ಲಾಳ್ ಬಾಗ್, ಶ್ರೀ ರಾಜೇಶ್ ಉಲ್ಲಾಳ್, ಶ್ರೀ ಉಮೇಶ್ ಪಟ್ಟಾಜೆ, ಶ್ರೀಮತಿ ಹೇಮಲತಾ ತೊಕ್ಕೊಟ್ಟು. ಸುಮನ, ರೇಖಾ ರೋಶನ್. ಸೀತಾ ಉಡುಪಿ,ಮತ್ತು ಶ್ರೀಮತಿ ಡೊಲ್ಸಿ ಫೆರ್ನಾಂಡಿಸ್, ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೊಂದು ಸಂಘದ ಇತಿಹಾಸದಲ್ಲಿ ವೈಭವಯುತ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು. ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಕಲಾ ಲೋಕವನ್ನೇ ಸೃಷ್ಟಿಸಿ ನೆರೆದ ಸ್ಥಳೀಯರು ಹಾಗೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ಸೀತಾರಾಮ ಮಲ್ಲ ಪ್ರಾರ್ಥನೆ ನಡೆಸಿಕೊಟ್ಟರು.

ವಿಶ್ವನಾಥ ಪುತ್ತಿಗೆ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬದ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ರಂಗು ಕೊಟ್ಟರು.ಡಾ ವಾಣಿಶ್ರೀ ಕಾಸರಗೋಡು ಕಾರ್ಯಕ್ರಮ ಸಂಯೋಜಿಸಿ ವಂದನಾರ್ಪಣೆಗೈದರು. ಶ್ರೀ ಸುರೇಶ್ ಉಡುಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾನ್ವಿ ಉಡುಪಿ,ಸೌಮ್ಯ,ಅಮೃತ್, ಐಶ್ವರ್ಯ,ರೋಹಿತ್, ತೇಜಸ್ವಿನಿ, ಮೋಕ್ಷ, ಮುಕ್ತಿ, ಕೃಪಾಶ್ರೀ, ಧನ್ವಿನ್, ಜಾಹ್ನವಿ, ತನ್ವಿಶ್,ಶ್ರೇಯಾ,ಆತ್ಹ್ಮಿಕ, ಹರ್ಷಿಶ್, ಯಶಸ್ವಿನಿ,ಜಿಯಾನ್, ಸ್ಮಾಹಿ, ಧೀರಜ್, ಸುವಾನ್, ಭವಿತ್, ಹರ್ಷಿತ್, ಲಕ್ಷ್ಮೀಶ್, ಆರಾಧ್ಯ, ಶ್ರೇಯ. ಶ್ರೇಯಸ್,ಲಿಯ, ಲಿಶ, ರಕ್ಷಿತಾ. ಹಾರ್ದಿಕ, ಅಜಿತ್ ಮುಂತಾದ 40 ಕ್ಕೂ ಅಧಿಕ ಅಪ್ರತಿಮ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡಿ ಸಂಸ್ಕೃತಿಯ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!