ದೈವಾರಾಧನೆ

ದೈವರಾಧನೆಯಲ್ಲಿ “ತೆoಬರೆ” ಬಹಳ ಮುಖ್ಯವಾದದ್ದು, ಎಣ್ಣೆ ಬೂಲ್ಯ ಹಿಡಿಯುವಾಗದಿಂದ ಹಿಡಿದು ದೈವ ಬಿರಿಯುವವರೆಗೆ ಇದು ದೈವ ನರ್ತಕರ ಕೈಯಲ್ಲಿ ಶಬ್ದ ಮಾಡುತ್ತಿರ ಬೇಕಾಗುತ್ತದೆ.

ದೈವ ಅರ್ಧಲ ಹಾಕುವಾಗ ದೈವ ನರ್ತಕನ ಹೆಂಡತಿ ಅಥವಾ ಅಮ್ಮ ಇದನ್ನು ಬಡಿಯುತ್ತಾ ಪಾಡ್ದನ ಹೇಳುತ್ತಿರುತ್ತಾರೆ.

ಒಂದೊಂದು ದೈವದ ಪಾಡ್ದನಕ್ಕೆ ಹಲವು ರೀತಿಯ ಶಬ್ದಗಳಿರುತ್ತದೆ,


ಸೇರಿದ ಜನಗಳು ಮೌನವಾಗಿದ್ದರೆ, ಇದರ ಶಬ್ದ ಹಾಗೂ ಪಾಡ್ದನವನ್ನು ಕೇಳಲು ಒಳ್ಳೇದಾಗುತ್ತದೆ
ಮೊದಲಿನ ಕಾಲದಲ್ಲಿ ದೈವ ಕೋಲವನ್ನು ನೆರೆಕರೆಯ ಮನೆ ಮನೆಗೆ ಹೋಗಿ ಹೇಳುತ್ತಿರಲಿಲ್ಲ, ತೆoಬರೆಯ ಶಬ್ದ ಕೇಳಿ ಬರುತ್ತಿದ್ದರು

ಈಗ ಹೆಚ್ಚಿನ ದೈವ ನರ್ತಕರಲ್ಲಿ ನಿಜವಾದ ತೆoಬರೆ ಮಾಯವಾಗಿದೆ. ಆಧುನಿಕ ತೆoಬರೆ ಗಳು ಬಂದಿವೆ

ಕುಪ್ಪೆ ಪಂಜುರ್ಲಿ ದೈವಕ್ಕೆ ಹೆಚ್ಚಾಗಿ ತೆoಬರೆ ಯಲ್ಲಿಯೇ ಕೋಲ ನಡೆಯುವುದು

ಏನೇ ಆಗಲಿ ಮುಂದಿನ ಪೀಳಿಗೆಗೆ ದೈವಾರಾಧನೆಯ ಅರಿವು ಮೂಡಲಿ, ದೈವಾರಾಧನೆ ಕಟ್ಟು ಕಟ್ಟಳೆ ಉಳಿಯಲಿ 🙏

ನಂಬಿಕೆ ಒರಿಪಾಗ 🙏

❣️ಸ್ನೇಹಜೀವಿ❣️

ಬರಹ:-✍️
ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು 671124

SHARE
Loading spinner

Leave a Reply

Your email address will not be published. Required fields are marked *

error: Content is protected !!