ಪುತ್ತೂರು : ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಕೊರಿಂಗಿಲ ಜುಮಾ ಮಸೀದಿಯಲ್ಲಿ ನಡೆಯಿತು.
ಕೊರಿಂಗಿಲ ಜಮಾಅತ್ ನ ಸದಸ್ಯರಾದ ಶಾಹುಲ್ ಹಮೀದ್ KMK ಹಾಗೂ ಪುತ್ತುಚ್ಚ ಗುಂಡ್ಯಡ್ಕ ಇವರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದು ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಖತೀಬರಾದ ಬಹು. ಅಲ್ಹಾಜ್ GH ಅಯ್ಯೂಬ್ ವಹಬಿ, KJM ಅಧ್ಯಕ್ಷರಾದ ಜ. ಮುಹಮ್ಮದ್ ಕುಂಞ ಹಾಜಿ, ಪ್ರಧಾನ ಕಾರ್ಯದರ್ಶಿ ಮೂಸೆ ಕುಂಞ ಬೆಟ್ಟoಪಾಡಿ, ಕೋಶಾಧಿಕಾರಿ ಮುಹಮ್ಮದ್ ಹಾಜಿ ಶಾಲಾಬಳಿ, ಉಪಾಧ್ಯಕ್ಷರಾದ ಆಲಿ ಕುoಞ ಹಾಜಿ, ಹಮೀದ್ ಕೊಮ್ಮೆಮ್ಮಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.