ಕಾಸರಗೋಡು: ಕಾಣೆಯಾಗಿದ್ದ ವೃದ್ಧೆಯನ್ನು ಮೃತ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಮಡಿಯನ್ ನಿವಾಸಿ ತಾತ್ರೋಡನ್ ಕೃಷ್ಣ ಎಂಬುವರ ಪತ್ನಿ ಜಾನಕಿ (74) ಮೃತ ದುರ್ದೈವಿ.

ಅಜಾನೂರ್ ಅಳ್ಳಂಕೋಡು ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಇವರನ್ನು ಕಾಣೆಯಾಗಿದ್ದು, ಬಳಿಕ ಕುಟುಂಬಸ್ಥರು ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು.

ಅಚಾತುರ್ಯದಿಂದ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

