ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಸೂತ್ರಧಾರರ ಬಂಧನ

​ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಹಣಕಾಸು ವಂಚನೆಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಜಾಲದ ಪ್ರಮುಖರನ್ನು ತಲಕ್ಕೇರಿ ಎಎಸ್‌ಪಿ ಡಾ. ಎಂ. ನಂದಕುಮಾ‌ರ್ ನೇತೃತ್ವದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

​ಕಾಸರಗೋಡು ಮೊಗ್ರಾಲ್‌ನ ಅಬ್ದುಲ್ ರಹ್ಮಾನ್ (36) ಹಾಗೂ ಎರ್ನಾಕುಳಂನ ಕೆ.ಎಂ. ರಿಶಾದ್ (41) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ನೂರಾರು ಆಧಾರ್ ಕಾರ್ಡ್‌ಗಳು, ಪಾನ್‌ಕಾರ್ಡ್‌ಗಳು, ನಕಲಿ ಸರ್ಟಿಫಿಕೇಟ್‌ಗಳು, ಸಿಮ್‌ ಕಾರ್ಡ್‌ಗಳು ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

​ ಸಾವನ್ನಪ್ಪಿದವರು ಮತ್ತು ಬೀದಿ ಬದಿಯಲ್ಲಿ ತಿರುಗಾಡುವವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ದೆಹಲಿಯಿಂದ ಎಂಡಿಎಂಎ ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ಸಾಗಾಟ ಮಾಡಲು ಈ ಜಾಲ ಬಳಸಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!