ಅಮೆರಿಕದಲ್ಲಿ ಅದಾನಿ ವಿರುದ್ಧದ ಪ್ರಕರಣ ರದ್ದು:ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಮೆರಿಕದಲ್ಲಿ ಅದಾನಿ ವಿರುದ್ಧದ ಪ್ರಕರಣ ರದ್ದುಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ರಾಜಿ ಮಾಡಿಕೊಂಡಿರುವ ಪ್ರಧಾನಿ ಭಾರತದ ಹಿತಾಸಕ್ತಿಗಳನ್ನು ಮಾರಾಟ ಮಾಡಲು ಅನಿವಾರ್ಯರಾಗಿದ್ದಾರೆ. ಇದಕ್ಕಾಗಿ ದೇಶ ದೊಡ್ಡ ಬೆಲೆ ತೆರಬೇಕಾಗಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅದಾನಿ ವಿರುದ್ಧದ ಪ್ರಕರಣ ರದ್ದುಗೊಳಿಸುವಿಕೆಯ ಹಿಂದೆ ಹೊರಗೆ ಕಾಣುತ್ತಿರುವುದಕ್ಕಿಂತಲೂ ದೊಡ್ಡ ಸಂಗತಿಗಳಿವೆ ಎಂದು ಅವರು ಹೇಳಿದ್ದಾರೆ.

ಅದಾನಿ ವಿರುದ್ಧದ ವಂಚನೆ ಆರೋಪಗಳನ್ನು ಕೈಬಿಡುವ ಟ್ರಂಪ್ ಆಡಳಿತದ ಶಿಫಾರಸನ್ನು ಅಮೆರಿಕದ ನ್ಯಾಯಾಲಯ ಅಂಗೀಕರಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣವನ್ನು ಹಿಂಪಡೆಯಲು ಅಮೆರಿಕದ ನ್ಯಾಯಾಂಗ ಇಲಾಖೆ ಕೈಗೊಂಡಿರುವ ಕ್ರಮವು ಅತ್ಯಂತ ಅಸಾಮಾನ್ಯವಾದದ್ದು ಎಂದು ನ್ಯಾಯಾಧೀಶ ಗರೌಫಿಸ್ ಕೂಡ ಅಭಿಪ್ರಾಯಪಟ್ಟಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!