ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

ಕಾಸರಗೋಡು: ಶ್ರಾವಣ ಮಾಸದ ಪಂಚಮಿಯ ಅಂಗವಾಗಿ ಚಂದ್ರಗಿರಿ ಶಾಂತೇರಿ ಮಹಾಮಾಯೆ ದೇವರಮನೆಯ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನೆರವೇರಿತು.

ಪುರೋಹಿತರಾದ ಬ್ರಹ್ಮಶ್ರೀ ಸಿ.ಎಚ್. ವಾಸುದೇವ ಅಡಿಗ ಅವರ ನೇತೃತ್ವದಲ್ಲಿ ವಿಶೇಷ ನಾಗರ ಪಂಚಮಿ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ನಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!