ಶಾಲೆಗೆ ತೆರಳುತ್ತಿದ್ದ 13 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: 43 ವರ್ಷದ ವ್ಯಕ್ತಿ ಬಂಧನ

ಕಾಸರಗೋಡು: ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ಹದಿಮೂರು ವರ್ಷದ ವಿದ್ಯಾರ್ಥಿನಿಗೆ ದಾರಿಯಲ್ಲಿ ಅಡ್ಡಗಟ್ಟಿ ಕಿರುಕುಳ ನೀಡಲು ಯತ್ನಿಸಿದ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

​ಪಳ್ಳತ್ತಡ್ಕ ನಿವಾಸಿ ರಮೇಶ್ (43) ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ತಡೆದು, ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಲಾಗಿದೆ ಎಂದು ದೂರು ದಾಖಲಾಗಿತ್ತು.

​ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆರೋಪಿಯನ್ನು ಯಶಸ್ವಿಯಾಗಿ ಗುರುತಿಸಿ ಸೆರೆಹಿಡಿದಿದ್ದಾರೆ. ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ಹಾಗೂ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.

SHARE
Loading spinner

One thought on “ಶಾಲೆಗೆ ತೆರಳುತ್ತಿದ್ದ 13 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: 43 ವರ್ಷದ ವ್ಯಕ್ತಿ ಬಂಧನ”

  1. [591]blazespins Official Login | সেরা অনলাইন ক্যাসিনো ও স্লট গেম,blazespins-এ আজই যোগ দিন। বিকাশ দিয়ে টাকা জমা করে সেরা অনলাইন ক্যাসিনো গেম এবং স্লট গেম উপভোগ করুন। এখনই অ্যাপটি ডাউনলোড করে খেলা শুরু করুন। visit: blazespins

    Loading spinner

Leave a Reply

Your email address will not be published. Required fields are marked *

error: Content is protected !!