ಮಂಗಳೂರು : ಆಮೆಗತಿಯಲ್ಲಿ ಸಾಗುತ್ತಿರುವ ಮಂಗಳೂರು ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯು ಸುತ್ತಮುತ್ತಲಿನ ಪ್ರದೇಶವಾಸಿಗಳಿಗೆ ತೊಂದರೆ ಕೊಡುವುದಂತೂ ಸತ್ಯ . ಒಂದು ವರ್ಷದಲ್ಲಿ ಕಾಮಗಾರಿ ಪೂರ್ತಿಯಾಗುತ್ತೆ ಎನ್ನುವ ವಿಸ್ವಾಸವನ್ನು ನೀಡಿದ್ದ ರೈಲ್ವೇ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮೂರು ವರುಷ ಕಳೆಯುತ್ತಾ ಬಂದರೂ ಕಾಮಗಾರಿಯನ್ನು ಪೂರ್ತಿ ಮಾಡದೇ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ . ಅತ್ಯಂತ ನುರಿತ ತಾಂತ್ರಿಕರು ಇದ್ದರೂ ಕಾಮಗಾರಿ ಪೂರ್ತಿಯಾಗದೇ ಅಲ್ಲಿನ ನಗರವಾಸಿಗಳಿಗೆ ತೊಂದರೆಯನ್ನು ನೀಡುತ್ತದೆ . ಜೆಪ್ಪಿನಮೊಗೇರಿನಿಂದ ಸ್ಟೇಟ್ ಬ್ಯಾಂಕ್ ರಸ್ತೆಯನ್ನು ಸುಲಭವಾಗಿ ಸಂಚರಿಸಲು ಈ ಅಂಡರ್ ಪಾಸ್ ನ ನಿರ್ಮಾಣ ಆಗಿತ್ತು . ಈ ಅಂಡರ್ ಪಾಸ್ ತ್ವರಿತವಾಗಿ ಆಗಿದ್ದರೆ ಪಂಪವೆಲ್ , ಕಂಕನಾಡಿ ಮುಖಾಂತರ ಬಸ್ ಸಂಚರಿಸುವ ಬದಲು ಈ ಮಾರ್ಗವನ್ನು ಬಳಸಿ ವೇಗವಾಗಿ ನಗರ ತಲುಪುವ ಬಹುದಿತ್ತು . ಆದ್ರೆ ಕಾಮಗಾರಿ ವಿಳಂಬ ಇದಕ್ಕೆ ಅವಕಾಶವನ್ನು ನೀಡ್ತಾ ಇಲ್ಲ .
ಮಳೆಯಿಂದ ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ಈ ಭಾಗದಲ್ಲಿ ಮನೆಯ ಕೌಪೌಂಡ್ ಕುಸಿಯಲು ಸೇತುವೆಯ ಅಡಿಯಲ್ಲಿ ನಿಲ್ಲುವ ಕೃತಕ ನೆರೆಯು ಕಾರಣವಾಗುತ್ತಿದೆ . ಇನ್ನು ಮಣ್ಣು ತೆರವು ಗೊಳಿಸುವ ಕಾರ್ಯ ಸದ್ಯ ಆ ಪ್ರದೇಶದಲ್ಲಿ ಆಮೆಗತಿಯಲ್ಲಿ ಸಾಗುತಿದೆ . ಅಂಡರ್ ಪಾಸ್ ನ್ನು ನೋಡುವಾಗ ಇದು ಅಂಡರ್ ಪಾಸೋ ಸ್ವಿಮಿಂಗ್ ಪುಲೋ ಎನ್ನುವ ಹಾಗೇ ಬಾಸವಾಗುತ್ತಿದೆ .