ಕಾಸರಗೋಡು: 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ಳಿಕೆರೆ ಕೀಕ್ಕಾನದಲ್ಲಿ ನಡೆದಿದೆ. ಕೀಕ್ಕಾನ ನಿವಾಸಿ ಧ್ಯಾನ್‌ರಾಜ್ (15) ಮೃತಪಟ್ಟ ವಿದ್ಯಾರ್ಥಿ.

ಕಾಸರಗೋಡಿನ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಧ್ಯಾನ್‌ರಾಜ್ ಶುಕ್ರವಾರ ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಉದ್ಯೋಗಿ ರಾಜೇಶ್ ಕುಮಾರ್ ಹಾಗೂ ಮಾನ್ಯ ಕಲ್ಲಕಟ್ಟದ ಶಿಕ್ಷಕಿ ನಿರೀಕ್ಷಾ ದಂಪತಿಯ ಪುತ್ರನಾಗಿದ್ದ ಧ್ಯಾನ್‌ರಾಜ್‌ಗೆ ಓರ್ವ ಸಹೋದರಿ ಇದ್ದಾಳೆ. ಘಟನೆ ಕುರಿತು ಬೇಕಲ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಕಷ್ಟದ ಕ್ಷಣದಲ್ಲಿ ಆತ್ಮಹತ್ಯೆ ಪರಿಹಾರವಲ್ಲ.ಯಾವುದೇ ಸಮಸ್ಯೆ ಎದುರಾದರೂ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡಿ, ಅಗತ್ಯ ಸಹಾಯ ಪಡೆಯುವುದು ಮುಖ್ಯ. ಜೀವನ ಅಮೂಲ್ಯವಾಗಿದ್ದು, ಸಮಸ್ಯೆಗಳಿಗೆ ಪರಿಹಾರವಿದೆ.

