ಕಾಸರಗೋಡು : ಮುಳ್ಳೇರಿಯ ಕಾರ್ಲೆ ನಿವಾಸಿ ಸುಲೋಚನ (46) ಎಂಬ ಗೃಹಿಣಿ ವಾಸಿಯಾಗದ ಗಂಟಲುನೋವಿನಿಂದ ಮನನೊಂದು ಹಟ್ಟಿಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ರಾತ್ರಿ ಕುಟುಂಬಸ್ಥರೊಂದಿಗೆ ಆಹಾರ ಸೇವಿಸಿ ಮಲಗಿದ್ದ ಅವರು, ಮರುದಿನ ಬೆಳಿಗ್ಗೆ ಕಾಣೆಯಾಗಿದ್ದರು. ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಹಟ್ಟಿಯಲ್ಲಿ ಅವರ ಶವ ಪತ್ತೆಯಾಗಿದೆ.
ದೀರ್ಘಕಾಲದಿಂದ ಪೀಡಿಸುತ್ತಿದ್ದ ಅನಾರೋಗ್ಯವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆದೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.


