ಕಾಸರಗೋಡು: ಆರೈಕೆಯ ನೆಪದಲ್ಲಿ ರಹಸ್ಯವಾಗಿ ನಗ್ನ ದೃಶ್ಯ ಚಿತ್ರೀಕರಣ: ಮಹಿಳೆ ಬಂಧನ

ಕಾಸರಗೋಡು : ಬಾಣಂತಿ ಮತ್ತು ಮಗುವಿನ ಆರೈಕೆಗಾಗಿ ಮನೆಗೆ ಬಂದು, ಯುವತಿಯ ನಗ್ನ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದ ಕರ್ನಾಟಕ ಮೂಲದ ಸುಲೈಖ ರಾಸಿಯಾ (25) ಎಂಬಾಕೆಯನ್ನು ಕಾಸರಗೋಡು ನಗರ ಪೊಲೀಸರು ಬಂಧಿಸಿದ್ದಾರೆ.

​ಕಾಸರಗೋಡಿನ 27 ವರ್ಷದ ಸಂತ್ರಸ್ತೆ ಈ ದೂರು ನೀಡಿದ್ದಾರೆ. ಈ ತಿಂಗಳ 7ರಿಂದ 20ರ ನಡುವೆ ಆರೈಕೆಯ ಸೋಗಿನಲ್ಲಿ ಈ ಕೃತ್ಯ ಎಸಗಲಾಗಿದೆ. ಆರೋಪಿಯ ಮೊಬೈಲ್ ಅನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿದಾಗ ವೀಡಿಯೋಗಳು ಹಾಗೂ ಫೋಟೋಗಳನ್ನು ಹಂಚಿಕೊಂಡಿರುವುದು ಬಯಲಾಗಿದೆ.

ತಕ್ಷಣವೇ ಸಂತ್ರಸ್ತೆ ಕುಟುಂಬದವರ ನೆರವಿನಿಂದ ದೂರು ದಾಖಲಿಸಿದ್ದಾರೆ. ಪತಿಯೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!