ಮಂಜೇಶ್ವರ: ಕೇರಳ–ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ವರ್ಕಾಡಿ ಬಾಕ್ರಬೈಲ್ ಪ್ರದೇಶದ ಸಣ್ಣ ಲಾಟರಿ ಸ್ಟಾಲ್ಗೆ ಓಣಂ ಬಂಪರ್ ಮೂಲಕ ಕೋಟಿಯ ಅದೃಷ್ಟ ಒಲಿದುಬಂದಿದೆ.
ಶ್ರೀಶಾರದಾಂಬ ಕಾಳಿ ಚಾಮುಂಡಿ ಲಾಟರಿ ಏಜೆನ್ಸಿ ಮಾರಾಟ ಮಾಡಿದ TA 300530 ಸಂಖ್ಯೆಯ ಟಿಕೆಟ್ಗೆ ಒಂದು ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಬಾಕ್ರಬೈಲ್ ನಿಂದ ಕೇವಲ ಹತ್ತು ಮೀಟರ್ ದೂರದಲ್ಲೇ ಕರ್ನಾಟಕ ಗಡಿಯಿದೆ. ಹೀಗಾಗಿ ಕೇರಳದವರ ಜೊತೆಗೆ ಕರ್ನಾಟಕದಿಂದಲೂ ಜನರು ಇಲ್ಲಿಗೆ ಬಂದು ಲಾಟರಿ ಟಿಕೆಟ್ ಖರೀದಿಸುತ್ತಾರೆ.

ಈ ಏಜೆನ್ಸಿಗೆ ಈ ಹಿಂದೆಯೂ ಹಲವು ಬಹುಮಾನಗಳು ಲಭಿಸಿವೆ. ಆದರೆ ಇದುವರೆಗೆ ಸಿಕ್ಕಿದ್ದ ಅತಿ ದೊಡ್ಡ ಬಹುಮಾನ 60 ಸಾವಿರ ರೂಪಾಯಿಯಾಗಿತ್ತು. ಇದೇ ಮೊದಲ ಬಾರಿಗೆ ಈ ಲಾಟರಿ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್ಗೆ ಒಂದು ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಲಾಟರಿ ಸ್ಟಾಲ್ ಮಾಲೀಕ ಮಂಜುನಾಥ್ ಸಂತಸದಲ್ಲಿದ್ದಾರೆ. ಸಣ್ಣ ಬಹುಮಾನಗಳಿಂದ ಕೋಟಿಯ ಬಹುಮಾನವರೆಗೆ ತಲುಪಿರುವ ಈ ಸಾಧನೆ ಏಜೆನ್ಸಿಗೂ ಹೆಮ್ಮೆಯ ವಿಷಯವಾಗಿದೆ.

ಧನೇಶ್ ಅವರ ನ್ಯೂಲಕ್ಕಿ ಸೆಂಟರ್ನಿಂದ ಬಹುಮಾನ ಗೆದ್ದ ಟಿಕೆಟ್ ಖರೀದಿಸಲಾಗಿದೆ. ಅದೃಷ್ಟಶಾಲಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕಾತರದಲ್ಲಿ ಇದೀಗ ಬಾಕ್ರಬೈಲ್ ಹಾಗೂ ಲಾಟರಿ ಏಜೆನ್ಸಿ ಮಾಲೀಕರದ್ದಾಗಿದೆ
ಗಡಿ ಗ್ರಾಮದಲ್ಲಿರುವ ಸಣ್ಣ ಲಾಟರಿ ಸ್ಟಾಲ್ಗೆ ಒಲಿದುಬಂದ ಒಂದು ಕೋಟಿಯ ಅದೃಷ್ಟ ಸ್ಥಳೀಯರಲ್ಲಿಯೂ ಸಂಭ್ರಮ ಮೂಡಿಸಿದೆ.


