ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನಲ್ಲಿ ₹50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ವೀರನಗರ ರಮೇಶ್ ಭಂಡಾರಿ ಮನೆಯಿಂದ ಬಾಬು ಮನೆಯವರೆಗೆ ಹಾಗೂ ಅಂಗನವಾಡಿಯಿಂದ ಕಟ್ಟೆ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ 50ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಅನೇಕ ವರ್ಷಗಳಿಂದ ಈ ರಸ್ತೆಯು ಕಾಂಕ್ರೀಟೀಕರಣಗೊಳ್ಳಬೇಕು ಎಂಬುದು ಈ ಭಾಗದ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಾವತಿ ವಿಶ್ವನಾಥ್‌ ಹಾಗೂ ಸ್ಥಳೀಯ ಪ್ರಮುಖರ ಬೇಡಿಕೆಯಾಗಿತ್ತು. ಅದರಂತೆ ಅನುದಾನಗಳನ್ನು ಹೊಂದಿಸಿಕೊಂಡು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ವೀರನಗರದ ಅತ್ಯಂತ ಎತ್ತರ ತಗ್ಗು ಇದ್ದಂತಹ ಪ್ರದೇಶದ ರಸ್ತೆಯನ್ನು ನಿರ್ಮಿಸುವ ಸಂದರ್ಭದಲ್ಲಿ ಸ್ಥಳೀಯರು ಸಂಪೂರ್ಣ ಸಹಕಾರ ನೀಡಿದ್ದರು. ಅದೇ ರೀತಿಯ ಸಹಕಾರವನ್ನು ಈಗಲೂ ನೀಡುವಂತೆ ಶಾಸಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುಂದರ ಪೂಜಾರಿ, ಮಹಾಬಲ ಶೆಟ್ಟಿ, ಯಶವಂತ್ ಅಮೀನ್, ಸಂದೀಪ್ ಶೆಟ್ಟಿ, ಚರಣ್, ಮನೋಜ್ ವೀರನಗರ, ವಿಶು, ಬಾಲಕೃಷ್ಣ, ಶಾಶ್ವಿತ್ ಪೇರ್ಲ, ಗಣೇಶ್ ಶೆಟ್ಟಿ, ಕೇಶವ ಪೂಜಾರಿ, ಶೇಖರ ಪೂಜಾರಿ, ವಸಂತ್ ಶೆಟ್ಟಿ, ವಿಶ್ವನಾಥ್, ಪ್ರವೀಣ್, ದಾಮೋದರ್, ದೇವದಾಸ್ ಶೆಟ್ಟಿ ಪ್ರಕಾಶ್,ಪ್ರಶಾಂತ್, ಸುನಿತಾ, ಜಯಂತಿ ಶೆಟ್ಟಿ, ವನಿತಾ ಶೆಟ್ಟಿ, ಅರುಣಾ, ಮಮತ, ರಾಜೀವಿ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!