9ನೇ ತರಗತಿ ಬಾಲಕಿ ಗರ್ಭಿಣಿ, ಸ್ನೇಹಿತನ ವಿರುದ್ಧ ಪೋಕ್ಸೋ ಪ್ರಕರಣ

​ಕಾಸರಗೋಡು : ವೆಳ್ಳರಿಕುಂಡ್‌ನಲ್ಲಿ 9ನೇ ತರಗತಿಯ ಬಾಲಕಿ ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾದಾಗ, ಆಕೆ 4 ತಿಂಗಳ ಗರ್ಭಿಣಿಯೆಂಬ ಆಘಾತಕಾರಿ ವಿಷಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ವೈದ್ಯಕೀಯ ತಪಾಸಣೆಯ ಬಳಿಕ ಆಸ್ಪತ್ರೆ ಅಧಿಕಾರಿಗಳು ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

​ಈ ಹಿನ್ನೆಲೆಯಲ್ಲಿ ವೆಳ್ಳರಿಕುಂಡ್ ಪೊಲೀಸರು ತನಿಖೆ ಕೈಗೊಂಡು, ಬಾಲಕಿಯ ಸ್ನೇಹಿತನಾದ 18 ವರ್ಷದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಲೆಮರೆಸಿಕೊಂಡಿರುವ ಆರೋಪಿ ಯುವಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

SHARE
Loading spinner

One thought on “9ನೇ ತರಗತಿ ಬಾಲಕಿ ಗರ್ಭಿಣಿ, ಸ್ನೇಹಿತನ ವಿರುದ್ಧ ಪೋಕ್ಸೋ ಪ್ರಕರಣ”

Leave a Reply

Your email address will not be published. Required fields are marked *

error: Content is protected !!