ಡ್ಯಾಂಡಿಯಾ ನೈಟ್ 2.0: ಅ.18ರಂದು ಸುಲ್ತಾನ್ ಬತ್ತೇರಿಯಲ್ಲಿ ಕಾರ್ಯಕ್ರಮ

ಮಂಗಳೂರು: ನವರಾತ್ರಿ ಹಬ್ಬದ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ಪ್ರಸ್ತುತಿಯಲ್ಲಿ ‘ಡ್ಯಾಂಡಿಯಾ ನೈಟ್ 2.0’ ಕಾರ್ಯಕ್ರಮ ಅ.18ರಂದು ಸಂಜೆ 6.30ರಿಂದ ಸುಲ್ತಾನ್ ಬತ್ತೇರಿಯ ಎಡ್ಜ್ ವಾಟರ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಲೈವ್ ಪಂಜಾಬಿ ಡೋಲ್, ವಿವಿಧ ಮನರಂಜನಾ ಕಾರ್ಯಕ್ರಮಗಳು, ಉತ್ಸಾಹಭರಿತ ಆಟಗಳು ಹಾಗೂ ವೈವಿಧ್ಯಮಯ ಆಹಾರ ಮಳಿಗೆಗಳು ಇರಲಿವೆ. ಡ್ಯಾಂಡಿಯಾ ಸ್ಟಿಕ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು.

ಅತ್ಯುತ್ತಮ ಉಡುಗೆ, ಅತ್ಯುತ್ತಮ ಪ್ರದರ್ಶನ ಹಾಗೂ ಅತ್ಯುತ್ತಮ ಜೋಡಿ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆಹಾರ ಮಳಿಗೆಗಳಲ್ಲಿ ಶುಲ್ಕ ಅನ್ವಯವಾಗಲಿದೆ.

12 ವರ್ಷದೊಳಗಿನ ಮಕ್ಕಳಿಗೆ ₹200 ಹಾಗೂ ವಯಸ್ಕರಿಗೆ ₹299 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಟಿಕೆಟ್‌ಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 96111 93784 ಅಥವಾ 99808 83070 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಾಲೆಟ್ ಪಿಂಟೋ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!