ಕಾಸರಗೋಡು: ಗ್ರಾಹಕರಿಗೆ ಬಳಸಿದ ಎಣ್ಣೆಯನ್ನೇ ಮರುಬಳಕೆ ಮಾಡಿ ತಿಂಡಿ ತಯಾರಿಸುತ್ತಿದ್ದ ದೂರಿನನ್ವಯ ಕಾಸರಗೋಡು ಮತ್ತು ಕಾಞಂಗಾಡ್ ನಗರದ ಹಲವು ಹೋಟೆಲ್ ಹಾಗೂ ಗೂಡಂಗಡಿಗಳ ಮೇಲೆ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ರಾಜ್ಯಾದ್ಯಂತ ನಡೆಯುತ್ತಿರುವ ‘ಆಪರೇಶನ್ ತೆಳಿಮ’ ಅಭಿಯಾನದ ಭಾಗವಾಗಿ ಕಾಸರಗೋಡು ಆಹಾರ ಭದ್ರತಾ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಎಸ್. ಸಂಗೀತ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ತಪಾಸಣೆ ವೇಳೆ ಆರೋಗ್ಯಕ್ಕೆ ಕಂಟಕವಾಗುವಂತಹ ಸುಮಾರು 180 ಲೀಟರ್ ಮರುಬಳಕೆಯ ಅಡುಗೆ ಎಣ್ಣೆಯನ್ನು ಪತ್ತೆಹಚ್ಚಿ, ಸ್ಥಳದಲ್ಲೇ ನಾಶಪಡಿಸಲಾಗಿದೆ.ಅಲ್ಲದೆ, ಆಹಾರ ಭದ್ರತಾ ಮಾನದಂಡಗಳನ್ನು ಗಾಳಿಗೆ ತೂರಿದ 21 ನಿಯಮಬಾಹಿರ ಸಂಸ್ಥೆಗಳಿಗೆ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಲಾಗಿದೆ.ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಬರುವ ದಿನಗಳಲ್ಲೂ ಈ ತಪಾಸಣೆ ತೀವ್ರಗೊಳ್ಳಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.


Everything is straightforward and easy to navigate. I love how quick the registration is. Give bdbb44login a try if you want something simple.