ಕುಂಬಳೆಯಲ್ಲಿ ಅಕ್ರಮ ಮರಳು ಸಾಗಾಟ: ಇಬ್ಬರು ಬಂಧನ

ಕುಂಬಳೆ: ಕೇರಳದ ನದಿ ದಡ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ, ಪಾಚಾಣಿ ಹೊಳೆಯಿಂದ ಅಕ್ರಮವಾಗಿ ಮರಳು ಕದ್ದು ಸಾಗಿಸುತ್ತಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

​ಬಂಧಿತರನ್ನು ಶಿರಿಯಾದ ರಜಿನ್ ಕುಮಾರ್ (29) ಮತ್ತು ಇಚ್ಚಂಗೋಡಿನ ಮುಖೇಶ್ (27) ಎಂದು ಗುರುತಿಸಲಾಗಿದೆ. ಅಕ್ರಮ ಕೃತ್ಯಕ್ಕೆ ಬಳಸಿದ ಲಾರಿಯ ಆರ್‌ಸಿ ಮಾಲೀಕನ ಮೇಲೆಯೂ ಪ್ರಕರಣ ದಾಖಲಾಗಿದೆ.

​ ಚೇವಾರು ಬಳಿ ಕುಂಬಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಂಡೆಕಾಪುವಿನಿಂದ ಪೆರ್ಮುಡೆ ಕಡೆಗೆ ಮರಳು ತುಂಬಿಕೊಂಡು ಹೊರಟಿದ್ದ ಲಾರಿಯನ್ನು ತಡೆದು ಪರಿಶೀಲಿಸಿದಾಗ, ಮಾರಾಟಕ್ಕಾಗಿ ಅಕ್ರಮವಾಗಿ ಹೊಳೆಯಿಂದ ಮರಳು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ತಕ್ಷಣವೇ ಆರೋಪಿಗಳನ್ನು ವಶಕ್ಕೆ ಪಡೆದು, ವಾಹನವನ್ನು ಜಪ್ತಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!