ಮಂಜೇಶ್ವರ ಹೊಸಂಗಡಿ ಬಿ. ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯ ದ ಸ್ಥಾಪನೆ ಗೆ ಶ್ರಮವಹಿಸಿ ನಂತರ ಲೈಬ್ರರಿಯ ಸ್ಥಾಪಕ ಕಾರ್ಯದರ್ಶಿ ಯಾಗಿ ಸೇವೆಸಲ್ಲಿಸಿದ್ದ ನಿವೃತ ಮುಖ್ಯೋಪಾಧ್ಯಾಯ ಬಿ. ಗೋವಿಂದ ಶೆಟ್ಟಿಗಾರ್ ಮಾಸ್ತರ ವರ ನುಡಿನಮನ ಕಾರ್ಯಕ್ರಮವು ಇಂದು ಸಂಜೆ ಹೊಸಂಗಡಿ ಏ. ಕೆ .ಜಿ ಮಂದಿರದ ಬಿ.ಯಂ. ರಾಮಯ್ಯ ಶೆಟ್ಟಿ ಹಾಲ್ ನಲ್ಲಿ ಲೈಬ್ರರಿ ವತಿಯಿಂದ ನಡೆಯಿತು.
ಲೈಬ್ರರಿಯ ಆಡಳಿತ ಮಂಡಳಿ ಸದಸ್ಯ ಶ್ರೀ ವಿಶ್ವನಾಥ ಕುದುರು ರವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್.ಜಯಾನಂದ ನುಡಿನಮನ ವಿತ್ತರು. ತಾಲೂಕು ಲೈಬ್ರರಿ ಕಾರ್ಯದರ್ಶಿ ಡಿ.ಕಮಲಾಕ್ಷ, ರಾಮಯ್ಯ ಶೆಟ್ಟಿ ಗ್ರಂಥಾಲಯ ದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೆ.ಕರುಣಾಕರ ಶೆಟ್ಟಿ, ಪ್ರಶಾಂತ್ ಕನಿಲ, ಕಮಲಾಕ್ಷ ಕನಿಲ, ವಾಣಿವಿಜಯ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣವೇಣಿ ಟೀಚರ್, ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರದ್ಧಾಂಜಲಿ ಸಲ್ಲಿಸಿದರು. ಲೈಬ್ರರಿ ಕಾರ್ಯದರ್ಶಿ ಹೇಮಚಂದ್ರ ಉಳ್ಳಾಲ್, ಗ್ರಂಥ ಪಾಲಕಿ ಶ್ರೀಮತಿ ಪವಿತ್ರ ಹಾಗೂ ಗೋವಿಂದ ಶೆಟ್ಟಿಗಾರ್ ಅವರ ಮಕ್ಕಳಾದ ಅಶ್ವಥ್ ಬಿ. ಮತ್ತು ಆಶಿತಾ ಬಿ. ಉಪಸ್ಥಿತರಿದ್ದರು.