ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ಹೆದರಿ ಕೇಂದ್ರದಿಂದ ದಮನಕಾರಿ ಕ್ರಮ: ಸಂತೋಷ್ ಬಜಾಲ್

ಮಂಗಳೂರು :56 ಇಂಚಿನ ಎದೆಯನ್ನು ಝೆನ್ ಝೀ ಹೋರಾಟ ಕುಗ್ಗಿಸಿದೆ ಎಂದು ಸಂತೋಷ್ ಬಜಾಲ್ ಹೇಳಿದ್ದಾರೆ.ಎಸ್ಐಆರ್ ರದ್ಧತಿಗೆ ಆಗ್ರಹಿಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಎಡಪಂಥೀಯ ಸಂಘಟನೆಗಳು ರಾಜ್ಯವ್ಯಾಪಿ ಹೋರಾಟಕ್ಕೆ ಕರೆನೀಡಿದ ಭಾಗವಾಗಿ ಎಸ್ಎಫ್ಐ, ಡಿವೈಎಫ್ಐ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯು ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ ಐನ ರಾಜ್ಯ ಕಾರ್ಯದರ್ಶಿಯಾದ ಸಂತೋಷ್ ಬಜಾಲ್ ಮಾತನಾಡುತ್ತಾ ದೇಶದ ನಾಗರಿಕತ್ವ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಎಸ್ಐಆರ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಚಳುವಳಿಗಳನ್ನು ಹತ್ತಿಕ್ಕುವ ಸಲುವಾಗಿ ದೆಹಲಿಯ 57 ಸ್ಟೇಷನ್ಗಳಲ್ಲಿ ಮೆಟ್ರೋ ರೈಲು ತಡೆ ಹಿಡಿಯಲಾಗಿದೆ. ವಿವಿಧ ರಾಜ್ಯಗಳಿಂದ ದೆಹಲಿಗೆ ತೆರಳುವ ರೈಲು, ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ದೆಹಲಿ ಹೋರಾಟಕ್ಕೆ ತೆರಳುತ್ತಿರುವ ಡಿವೈಎಫ್ಐ, ಎಸ್ಎಫ್ಐ ಸಹಿತ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದರು.

ಅಲ್ಲದೇ ದೆಹಲಿ ಗಡಿಭಾಗದಲ್ಲಿ ತಡೆಯುವ, ಇಂಟರ್ ನೆಟ್ ಕಡಿತ ಮಾಡುವ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಕೇಂದ್ರ ಸರಕಾದ ನಡೆಯನ್ನು ಖಂಡಿಸಿದರು.

ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಸಲಿರುವ ಹೋರಾಟವು ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿ ಕೂತಿರುವ 56 ಇಂಚಿನ ಎದೆಯಲ್ಲು ಭಯ ಹುಟ್ಟಿಸಿದೆ ಎಂದು ಟೀಕಿಸಿದರು.

ಡಿ ವೈ ಎಫ್ ಐ ನ ಜಿಲ್ಲಾ ಅಧ್ಯಕ್ಷರಾದ ಮನೋಜ್ ವಾಮಂಜೂರ್ ಮಾತನಾಡುತ್ತಾ ದೇಶದ ಇತಿಹಾಸದಲ್ಲಿ ಯಾವುದೇ ಕಾಲದಲ್ಲೂ ಕೂಡ ಚುನಾವಣಾ ಆಯೋಗವು ದೇಶದ ಪೌರತ್ವವನ್ನು ನಿರ್ಧರಿಸಿಲ್ಲ. ಆದರೆ ಎಸ್ಐಆರ್ ಮೂಲಕ ಗ್ಯಾನೇಶ್ ನೇತ್ರತ್ವದ ಚುನಾವಣಾ ಆಯೋಗವು ದೇಶದ ಪೌರತ್ವವನ್ನೇ ಪ್ರಶ್ನಿಸುತ್ತಿದ್ದು ಇದು ಭಾರತದ ಆದಿವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಮತ್ತು ಬಡವರ ಮತಗಳನ್ನು ಕಸಿದು ಕೊಳ್ಳುತ್ತಿದೆ. ಈ ಮೂಲಕ ದೇಶ ಕಟ್ಟಿದ ಅವರನ್ನು ದೇಶದಿಂದ ಹೊರ ದೂಡುವ ಕೆಸವನ್ನು ಮಾಡುತ್ತಿದೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!