ಬೇಕೂರಿನಲ್ಲಿ ಸಿಪಿಐ(ಎಂ) ಉಪ್ಪಳ ಲೋಕಲ್ ಬಹುಜನ ಸಂಗಮ

ಉಪ್ಪಳ: ಸಿಪಿಐ(ಎಂ) ಉಪ್ಪಳ ಲೋಕಲ್ ಸಮಿತಿಯ ವತಿಯಿಂದ ಬಹುಜನ ಸಂಗಮ ಕಾರ್ಯಕ್ರಮವು ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಿಪಿಐ(ಎಂ) ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಪಿ.ಕೆ. ನಿಶಾಂತ್ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸಮಿತಿ ಸದಸ್ಯ ನವೀನ್ ಕುಮಾರ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಸಾದಿಕ್ ಚೆರುಗೋಳಿ ಉಪಸ್ಥಿತರಿದ್ದರು. ಸಿಪಿಐ(ಎಂ) ಉಪ್ಪಳ ಲೋಕಲ್ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳಾರ್ ಸ್ವಾಗತಿಸಿದರು.

ಲೋಕಲ್ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ನೇತೃತ್ವವನ್ನು ಲೋಕಲ್ ಸಮಿತಿ ಸದಸ್ಯರಾದ ಸತೀಶ್ ಕಣ್ಣಟಿಪಾರೆ, ಪಾರ್ವತಿ ಬೇಕೂರು, ಪ್ರವೀಣ್ ಕನ್ನಟಿ ಪಾರೆ ಹಾಗೂ ಸಜನ್ ವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!