
ಕಾಸರಗೋಡು: ಪನತ್ತಡಿ ಸಂರಕ್ಷಿತ ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸಿದ್ದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರಿಕೆ ನಿವಾಸಿಗಳಾದ ಎಂ.ಎ. ಸುಬೀರ್ (46) ಮತ್ತು ನೌಫಲ್ (37) ಬಂಧಿತರು.

ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ, ಆರೋಪಿಗಳು ಕಾಞಂಗಾಡ್ ಫಾರೆಸ್ಟ್ ಆಫೀಸರ್ ಆರ್. ರಾಹುಲ್ ಅವರ ಮುಂದೆ ಶರಣಾಗಿದ್ದರು.

ಕಳೆದ ಸೆಪ್ಟೆಂಬರ್ 10ರಂದು ನಡೆದ ಅರಣ್ಯ ಇಲಾಖೆಯ ದಾಳಿ ವೇಳೆ ನಾಡಕೋವಿ, ಮದ್ದುಗುಂಡುಗಳು ಹಾಗೂ ಆರೋಪಿಯ ಮನೆಯಿಂದ 40 ಕಿಲೋ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಬೇಟೆಗಾರರ ಪತ್ತೆಗಾಗಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



The community here is amazing and the rewards are top notch. I’ve had some lucky wins lately and the withdrawal process was surprisingly fast. Big thanks to phponeclub.