ಡಿ.ವೈ.ಎಫ್.ಐ ಜಪ್ಪಿನಮೊಗರು ಘಟಕದ ವತಿಯಿಂದ 25ನೇ ವರ್ಷದ ದಸರಾ ಕ್ರೀಡಾಕೂಟವು ಎರ್ಮಾಜಾಲುಗುತ್ತು ದಿ! ಸಂಕಪ್ಪ ರೈ ಮತ್ತು ಕುಟುಂಬಸ್ಥರ ಸ್ಥಳ (ಜಪ್ಪಿನಮೊಗರು ಶಾಲಾವಠಾರ)ದಲ್ಲಿ ತಾ:11/10/2026ರಂದು ನಡೆಯಿತು.
ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪಿಲಿಚಾಮುಂಡಿ ಕ್ಷೇತ್ರ ಪಿಲಿಚಂಡಿ ಪಾದೆ ತಂದೊಳಿಗೆಯ ಅರ್ಚಕರು ಹಾಗೂ ಟ್ರಸ್ಟಿ ಶ್ರೀ ಕಿಶೋರ್ ಕೊಟ್ಟಾರಿಯವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಕ್ರೀಡಾಕೂಟದ ಉದ್ಘಾಟಣಾ ಸಮಾರಂಭದ ಅಧ್ಯಕ್ಷತೆಯನ್ನು ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ಉಪಾಧ್ಯಕ್ಷರಾದ ಶಿವಾನ್ ಅಮೀನ್ ರವರು ವಹಿಸಿದರು.
ಸಮಾರಂಭದಲ್ಲಿ ಪ್ರಗತಿ ಡ್ರೈವಿಂಗ್ ಸ್ಕೂಲ್ ಮಾಲಕರಾದ ಶ್ರೀ ಜೆ. ರಾಘವ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀಮತಿ ಜಯಂತಿ ಬಿ. ಶೆಟ್ಟಿ, ಡಿ.ವೈ.ಎಫ್.ಐ. ನಗರ ಸಮಿತಿಯ ಅಧ್ಯಕ್ಷರಾದ ಚರಣ್ ಶೆಟ್ಟಿ , ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ಅಧ್ಯಕ್ಷರಾದ ಜೆ. ಹನೀಫ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಜಪ್ಪಿನಮೊಗರು ಸಂಚಾಲಕರಾದ ಶ್ರೀ ದಿನೇಶ್ ಶೆಟ್ಟಿಯವರು, ಭಾರತೀಯ ಜೀವ ವಿಮಾ ನಿಗಮದ (LIC ) ಶ್ರೀಮತಿ ಸಾಹಿರ ಸ್ವರ್ಣಲತಾ ಡಿಸೋಜಾರವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ವಾಲಿಬಾಲ್ ಆಡೋದರ ಮುಖಾಂತರ ಕ್ರೀಡಾಕೂಟವನ್ನು ಪ್ರಾರಂಭಿಸಲಾಯಿತು. ಕೋಶಾಧಿಕಾರಿಯಾದ ಅಭಿಷೇಕ್ ರವರು ಸ್ವಾಗತಿಸಿದರು ಚಿರಾಗ್ ನಾಯ್ಕ್ ಅವರು ವಂದಿಸಿದರು. ಪವನ್ ಸುಲಾಯ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಮನೋಜ್ ಶೆಟ್ಟಿ ವಹಿಸಿದ್ದರು. ಡಿ.ವೈ.ಎಫ್.ಐ. ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಮನೋಜ್ ವಾಮಂಜೂರು, ಆಟೋಟ್ರೇಡರ್ಸ್ ಜಪ್ಪಿನಮೊಗರು & ಗೋರಿಗುಡ್ಡ ಇದರ ಮಾಲೀಕರಾದ ದಯಾನಂದ ರಾವ್, ಉದ್ಯಮಿಗಳಾದ ರಾಕೇಶ್ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿ. ದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ಶ್ರೀ ಕೋರ್ದಬ್ಬು ದೈವಸ್ಥಾನದ ತಾರ್ದೋಲ್ಯ ಜಪ್ಪಿನಮೊಗರು ಇದರ ಅಧ್ಯಕ್ಷರಾದ ಶ್ರೀ ಶೈಲೇಶ್ ಭಂಡಾರಿ , ಹಿಡೆನ್ ಹೆವೆನ್ ರೆಸಾರ್ಟ್ ಅಂಡ್ ಹೋಂ ಸ್ಟೇ ಜಪ್ಪಿನಮೊಗರು ಇದರ ಮಾಲಕರಾದ ಲ! ಸಂತೋಷ್ ಶೆಟ್ಟಿ, ಯುವ ಉದ್ಯಮಿಯಾದ ಶ್ರೀ ಶೈಲೇಶ್ ಪೂಜಾರಿ ತಂದೊಳಿಗೆ, ಜಪ್ಪಿನಮೊಗರು ಯುವಕ ವೃoದದ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ, ಸಿ. ಪಿ. ಐ.(ಮ್.) ಜಪ್ಪಿನಮೊಗರು ಶಾಖೆ ಕಾರ್ಯದರ್ಶಿಯಾದ ಶ್ರೀ ಉದಯಚಂದ್ರ ರೈ.ರವರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಸ್ಥಳೀಯ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಹಾಗೂ ಒಳಾoಗಣ ಸ್ವರ್ಧೆಗಳಾದ ಸಂಗೀತ, ಭಾಷಣ ಮತ್ತು ಚಿತ್ರಕಲಾ ಸ್ವರ್ಧೆಗಳನ್ನು ಏರ್ಪಡಿಸಲಾಯಿತು.

ಯುವಕರಿಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ – ಸನ್ ಸೈನ್ ದ್ವಿತೀಯ, ಹಗ್ಗಜಗ್ಗಾಟ ಮುಕ್ತ ವಿಭಾಗದಲ್ಲಿ ಜನತಾ ವ್ಯಾಯಾಮ ಶಾಲೆ ಬಜಾಲ್ ಪ್ರಥಮ – ತಾರ್ದೋಲ್ಯ ಸೇವಾ ಸಂಘ ಜಪ್ಪಿನಮೊಗರು ದ್ವಿತೀಯ,
85 ಕೆಜಿ ವಿಭಾಗದ ಹಗ್ಗಜಗ್ಗಾಟದಲ್ಲಿ ಮಲ್ಲಿಕಾರ್ಜುನ ಸೇವಾ ಸಂಘ ಜಪ್ಪಿನಮೊಗರು ಪ್ರಥಮ – ತಾರ್ದೋಲ್ಯ ಸೇವಾ ಸಂಘ ಜಪ್ಪಿನಮೊಗರು ದ್ವಿತೀಯ ಸ್ಥಾನವನ್ನು ಗೆದ್ದುಗೊಂಡಿದೆ.
ಮಹಿಳೆಯರಿಗಾಗಿ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಸ್ಪರ್ತಾನ್ ಪ್ರಥಮ – ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ – ಮಲ್ಲಿಕಾರ್ಜುನ ಸೇವಾ ಸಂಘ ಜಪ್ಪಿನಮೊಗರು ದ್ವಿತೀಯ ಸ್ಥಾನವನ್ನು ವಿಜೇತರಾದರು. ವಿಜೇತರಿಗೆ ಈ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಈ ಸಮಾರೋಪ ಸಮಾರಂಭವನ್ನು ಘಟಕದ ಕಾರ್ಯದರ್ಶಿಯಾದ ಸ್ವಸ್ತಿಕ್ ಎಸ್. ಶೆಟ್ಟಿರವರು ಸ್ವಾಗತಿಸಿದರು. ಮಿಖಿಲ್ ಶೆಟ್ಟಿ ರವರು ವಿಜೇತರಾದವರ ಹೆಸರನ್ನು ಓದಿದರು.
ಘಟಕದ ಜೊತೆಕಾರ್ಯದರ್ಶಿಯಾದ ಗಗನ್ ಪೂಜಾರಿಯವರು ಧನ್ಯವಾದವನ್ನು ಸಮರ್ಪಿಸಿ ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

