
ಬಂಟ್ವಾಳ: ದ.ಕ. ಜಿಲ್ಲೆಯ ಪ್ರದ್ಯಾ ವೈ. ಕುಲಾಲ್ ಅವರು ಎಳೆಯ ವಯಸ್ಸಿನಲ್ಲೇ ತಮ್ಮ ಅಪರೂಪದ ಪ್ರತಿಭೆಯ ಮೂಲಕ ಗಮನ ಸೆಳೆದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ‘IBR ಅಚೀವರ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಇವರ ಸಾಧನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ತಮ್ಮ ಶಾಸಕರ ಮನೆ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದ್ದಾರೆ.


ಬಿ.ಸಿ. ರೋಡ್ ಸಮೀಪದ ದೈಪಲ ನಿವಾಸಿಗಳಾದ ವಿಜಯಲಕ್ಷ್ಮಿ ಮತ್ತು ಯಾದವ ದಂಪತಿಯ ಕಿರಿಯ ಪುತ್ರಿ ಪ್ರದ್ಯಾ, ಎಸ್.ವಿ.ಎಸ್. ನರ್ಸರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿಯೇ ಐದು ಮಂತ್ರಗಳನ್ನು ಪಠಿಸುವುದರ ಜೊತೆಗೆ ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಾಲ್ಕು ಭಕ್ತಿಗೀತೆಗಳನ್ನು ಹಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರದ್ಯಾ ಅವರ ಈ ಗಮನಾರ್ಹ ಸಾಧನೆಯನ್ನು 2026ರ ಆ.18ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೃಢೀಕರಿಸಿದ್ದು, ಅವರಿಗೆ ‘IBR ಅಚೀವರ್’ ಗೌರವ ಲಭಿಸಿದೆ. ಎಳೆಯ ವಯಸ್ಸಿನಲ್ಲೇ ಸಾಧನೆ ಮೆರೆದಿರುವ ಪ್ರದ್ಯಾ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.


The daily rewards keep me coming back every single day. It is a great way to boost your balance while having fun. Visit logam88login for more.