
ಮಂಗಳೂರು: ಗೋಮಾತೆಯ ರಕ್ಷಣೆಯ ಉದ್ದೇಶದಿಂದ ಗೋಸಮ್ಮಾನ್ ಆಹ್ವಾನ ಅಭಿಯಾನ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ವತಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದಡಿ ಸಾರ್ವಜನಿಕರು ಯಾವುದೇ ಆರ್ಥಿಕ ದೇಣಿಗೆ ನೀಡುವ ಅಗತ್ಯವಿಲ್ಲ. ಗೋಮಾತೆಯ ರಕ್ಷಣೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ತಮ್ಮ ಒಂದು ಸಹಿಯನ್ನು ನೀಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಸಮಿತಿ ತಿಳಿಸಿದೆ.

ಕಟೀಲು, ಪೊಳಲಿ, ಬಪ್ಪನಾಡು, ಮಂಗಳಾದೇವಿ ಹಾಗೂ ಕುದ್ರೋಳಿ ಸೇರಿದಂತೆ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಸಮೀಪದ ಸಹಿ ಸಂಗ್ರಹ ಕೇಂದ್ರಗಳಿಗೆ ಭೇಟಿ ನೀಡಿ ಅಭಿಯಾನಕ್ಕೆ ಕೈಜೋಡಿಸುವಂತೆ ಸಮಿತಿ ಮನವಿ ಮಾಡಿದ್ದಾರೆ

