ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ದಸರಾ ನಾಡಹಬ್ಬ ಆಚರಣೆ

ಕಡoಬಾರು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ದಸರಾ ನಾಡಹಬ್ಬವನ್ನು ಸರಕಾರಿ ಪ್ರೌಢ ಶಾಲೆ ಕಡoಬಾರ್ ನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗಾಗಿ ಸಮೂಹ ಗೀತೆ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗಾಗಿ ಹುಲಿವೇಷ ಕುಣಿತ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರೌಢ ಶಾಲೆ ಉದ್ಯಾವರ, ದ್ವಿತೀಯ ಸ್ಥಾನವನ್ನು ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ ಮೀಯಪದವು ಹಾಗೂ ತೃತೀಯ ಸ್ಥಾನವನ್ನು ಸರಕಾರಿ ವೃತ್ತಿಪರ ಉನ್ನತ ಶಾಲೆ ಕುಂಜತ್ತೂರು ಶಾಲೆ ಪಡೆದುಕೊಂಡಿತು.

ಶಿಕ್ಷಕರ ಸಮೂಹ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಿರಿಯ ಪ್ರಾಥಮಿಕ ಶಾಲೆ ಹೆದ್ದಾರಿ, ದ್ವಿತೀಯ ಸ್ಥಾನವನ್ನು ಹಿರಿಯ ಪ್ರಾಥಮಿಕ ಶಾಲೆ ಬಾಕ್ರಬೈಲ್ ಹಾಗೂ ತೃತೀಯ ಸ್ಥಾನವನ್ನು ವಿದ್ಯಾವರ್ಧಕ ಶಾಲೆ ಮೀಯಪದವು ಪಡೆದುಕೊಂಡಿತು.

ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರುರವರ ಅದ್ಯಕ್ಷತೆಯಲ್ಲಿ ಜರಗಿದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ್, ಸಂಘಟನಾ ಕಾರ್ಯದರ್ಶಿ ಜಬ್ಬಾರ್, ಜತೆ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಉಪಾಧ್ಯಕ್ಷರಾದ ಉಮೇಶ್, ಕಡoಬಾರ್ ಶಾಲಾ ಮುಖ್ಯ ಶಿಕ್ಷಕರಾದ ಹರೀಶ್, ಅಬೂಬಕ್ಕರ್, ನಯನ ಪ್ರಸಾದ್, ವಿಜಯ್, ರೂಪೇಶ್, ದಿವಾಕರ ಬಳ್ಳಾಲ್, ವಸಂತ ಮೂಡಂಬೈಲ್, ಶಾಲಾ ಎಸ್ ಎಮ್ ಸಿ ಸದಸ್ಯರಾದ ಮುಸ್ತಫಾ ಕಡoಬಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕುಮಾರ್ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!