ಕಾಸರಗೋಡು ಆಸ್ಪತ್ರೆಯಲ್ಲಿ ನೇಮಕಾತಿ ಅಕ್ರಮದ ಆರೋಪ; ವಿಜಿಲೆನ್ಸ್ ತಪಾಸಣೆಯಲ್ಲಿ ಮಹತ್ವದ ಮಾಹಿತಿ

​ಕಾಸರಗೋಡು : ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ನೌಕರರ ನೇಮಕಾತಿ ಮತ್ತು ವಿಕಲಚೇತನ ಪ್ರಮಾಣಪತ್ರ ವಿತರಣೆಯಲ್ಲಿ ಭಾರಿ ವಂಚನೆ ನಡೆದಿರುವುದನ್ನು ವಿಜಿಲೆನ್ಸ್ ತಪಾಸಣೆ ಪತ್ತೆಹಚ್ಚಿದೆ.

ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ ನಾಯರ್ ನೇತೃತ್ವದಲ್ಲಿ ಈ ತಪಾಸಣೆ ನಡೆಸಲಾಗಿದೆ.

​2015ರಿಂದ ಆರ್‌ಎಸ್‌ಬಿವೈ ಯೋಜನೆಯಡಿ ಎಂಪ್ಲೋಯ್‌ಮೆಂಟ್ ಎಕ್ಸ್‌ಚೇಂಜ್ ಮಾನದಂಡಗಳನ್ನು ಗಾಳಿಗೆ ತೂರಿ 20ಕ್ಕೂ ಹೆಚ್ಚು ತಾತ್ಕಾಲಿಕ ನೌಕರರನ್ನು ಅಕ್ರಮವಾಗಿ ನೇಮಿಸಿಕೊಳ್ಳಲಾಗಿದೆ. ಅಲ್ಲದೆ, ಒಂದೇ ವ್ಯಕ್ತಿಗೆ ಪದೇ ಪದೇ ಅವಕಾಶ ನೀಡಲಾಗಿದೆ.

​ವಿಕಲಚೇತನ ಪ್ರಮಾಣಪತ್ರ ವಿತರಣೆಯಲ್ಲೂ ದೊಡ್ಡ ಮಟ್ಟದ ಗೋಲ್ಮಾಲ್ ನಡೆದಿದೆ. ಆನ್‌ಲೈನ್ ಅರ್ಜಿಗಳ ಹಿರಿಯತನವನ್ನು ಕಡೆಗಣಿಸಿ, ಕಚೇರಿಗೆ ನೇರವಾಗಿ ಬಂದು ಪ್ರಿಂಟೌಟ್ ನೀಡುವವರಿಗೆ ಮಾತ್ರ ಆದ್ಯತೆ ನೀಡಲಾಗಿದೆ.

ಇದರಿಂದ ಸಾವಿರಾರು ಸಾಮಾನ್ಯ ಜನರ ಅರ್ಜಿಗಳು ಬಾಕಿ ಉಳಿದಿದ್ದು, ಅಧಿಕಾರಿಗಳ ಈ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!