ಮಂತ್ರವಾದದ ಚಿಕಿತ್ಸೆಯ ನೆಪದಲ್ಲಿ ದೌರ್ಜನ್ಯ; ಮಂಜೇಶ್ವರದಲ್ಲಿ ನಕಲಿ ಮಂತ್ರವಾದಿ ಬಂಧನ

ಮಂಜೇಶ್ವರ : ಮಂತ್ರವಾದ ಚಿಕಿತ್ಸೆಯ ಹೆಸರಿನಲ್ಲಿ 17 ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿ, ಬಳಿಕ ಆಕೆಯ ತಾಯಿಯೊಂದಿಗೇ ಪರಾರಿಯಾಗಿದ್ದ ನಕಲಿ ಮಂತ್ರವಾದಿ ಮಲಪ್ಪುರಂ ಮೂಲದ ಜಸಲ್ ತಂಘಳ್ ಎಂಬಾತನನ್ನು ಮಂಜೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.

​ಚಿಕಿತ್ಸೆಗಾಗಿ ಮನೆಗೆ ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಈ ನಕಲಿ ಮಂತ್ರವಾದಿ, ಆಕೆಯ ತಾಯಿಯ ಜೊತೆ ಸಲುಗೆ ಬೆಳೆಸಿ ಆಕೆಯನ್ನೂ ಕರೆದುಕೊಂಡು ನಾಪತ್ತೆಯಾಗಿದ್ದ.

ಕರ್ನಾಟಕ-ಕೇರಳ ಗಡಿಯ ಆನೆಕಲ್ಲು ಪ್ರದೇಶದಲ್ಲಿ ಇಬ್ಬರೂ ರಹಸ್ಯವಾಗಿ ತಂಗಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಮಂಜೇಶ್ವರ ಪೊಲೀಸರು, ಎಡವಣ್ಣ ಪೊಲೀಸರು ಹಾಗೂ ನಿಲಂಬೂರು ಎಸ್‌ಎಂಡಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

​ಹಲವರಿಗೆ ಮಂತ್ರವಾದದ ಚಿಕಿತ್ಸೆ ನೀಡುವುದಾಗಿ ನಂಬಿಸುತ್ತಿದ್ದ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!