ಮಂಜೇಶ್ವರ : ನವರಾತ್ರಿ ಹಬ್ಬದ ಪ್ರಯುಕ್ತ ಮಂಜೇಶ್ವರದ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ,ಭಜನೆ

ಮಂಜೇಶ್ವರ: ನವರಾತ್ರಿ ಹಬ್ಬದ ಪ್ರಯುಕ್ತ ಮಂಜೇಶ್ವರದ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಗಣೇಶ್ ಪಾವೂರು, ಉಪಾಧ್ಯಕ್ಷ ಗಂಗಾಧರ ದುರ್ಗಿಪಳ್ಳ, ಖಜಾಂಚಿ ಸುರೇಶ್ ಕುಮಾರ್, ಪಿಟಿಎ ಅಧ್ಯಕ್ಷೆ ಜಯಲಕ್ಷ್ಮಿ, ಶಾಲಾ ಮ್ಯಾನೇಜರ್ ದಯಾನಂದ ಪಾವೂರು, ಪ್ರಾಂಶುಪಾಲೆ ಮಂಜುಳಾ ಹಾಗೂ ಉಪಪ್ರಾಂಶುಪಾಲೆ ಮಾಲತಿ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾರದಾ ದೇವಿಯ ಆರಾಧನೆಯಲ್ಲಿ ಪಾಲ್ಗೊಂಡರು. ನವರಾತ್ರಿ ಹಬ್ಬದ ಅಂಗವಾಗಿ ನಡೆದ ಪೂಜೆ ಮತ್ತು ಭಜನಾ ಕಾರ್ಯಕ್ರಮವು ಭಕ್ತಿಮಯ ವಾತಾವರಣದಲ್ಲಿ ಜರುಗಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!