ಮಂಗಳೂರು: ಬಿಂದು ಜುವೆಲ್ಲರಿಯ ಮಂಗಳೂರು ಬೆಂದೂರು ಮಳಿಗೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ‘ನಮ್ಮ ಮಂಗಳೂರು ಶೃಂಗಾರ’ ಅಭಿಯಾನದ ವಿಶೇಷ ಕಾರ್ಯಕ್ರಮ ಇಂದು ನಡೆಯಿತು. ಈ ಪ್ರಯುಕ್ತ ಗ್ರಾಹಕರಿಗಾಗಿ ಲಕ್ಕಿ ಡ್ರಾ ಸೇರಿದಂತೆ ಹಲವು ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.


ಲಕ್ಕಿ ಡ್ರಾದಲ್ಲಿ ಪ್ರಥಮ ಬಹುಮಾನವಾಗಿ ₹1 ಲಕ್ಷ ಮೌಲ್ಯದ ವಜ್ರದ ನೆಕ್ಲೆಸ್, ದ್ವಿತೀಯ ಬಹುಮಾನವಾಗಿ ₹50 ಸಾವಿರ ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ತೃತೀಯ ಬಹುಮಾನವಾಗಿ ₹25 ಸಾವಿರ ಮೌಲ್ಯದ ವಜ್ರದ ಉಂಗುರ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ಬಹುಮಾನವಾಗಿ ಐದು ಸ್ಮಾರ್ಟ್ಫೋನ್ಗಳನ್ನು ನೀಡಲಾಗುತ್ತದೆ.

ಬಿ-ಲೈಟ್ ಆಭರಣಗಳಿಗೆ ವಿಶೇಷ ರಿಯಾಯಿತಿ
ಬಿಂದು ಜುವೆಲ್ಲರಿಯ ಹಗುರವಾದ ಆಭರಣಗಳ ಸಂಗ್ರಹವಾದ ಬಿ-ಲೈಟ್ ಖರೀದಿಗೂ ವಿಶೇಷ ಕೊಡುಗೆ ಘೋಷಿಸಲಾಗಿದೆ. 18 ಕ್ಯಾರಟ್ ಆಭರಣಗಳ ಖರೀದಿಗೆ ಶೇ.5 ಹಾಗೂ 9 ಕ್ಯಾರಟ್ ಆಭರಣಗಳ ಖರೀದಿಗೆ ಶೇ.10ರಷ್ಟು ರಿಯಾಯಿತಿ ಲಭ್ಯವಿದೆ.
ನವೆಂಬರ್ 15ರವರೆಗೆ ‘ಸೀಸನ್ ಆಫ್ ಶೃಂಗಾರ’
ವಾರ್ಷಿಕೋತ್ಸವದ ಕೊಡುಗೆಗಳ ಜತೆಗೆ ನವೆಂಬರ್ 15ರವರೆಗೆ ‘ಸೀಸನ್ ಆಫ್ ಶೃಂಗಾರ’ ಅಭಿಯಾನವೂ ನಡೆಯಲಿದೆ. ಮದುವೆ, ಶುಭ ಸಮಾರಂಭ, ಹಬ್ಬಹರಿದಿನ ಹಾಗೂ ಜೀವನದ ಸ್ಮರಣೀಯ ಕ್ಷಣಗಳಿಗೆ ಮೆರುಗು ನೀಡುವ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಹಲವು ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ಪ್ರಕಟಿಸಿದೆ.

ಈ ಅಭಿಯಾನದಡಿ ಒಟ್ಟು 164 ಗ್ರಾಂ ಚಿನ್ನದ ಬಹುಮಾನಗಳ ಜತೆಗೆ ಕಾರು ಮತ್ತು ಬೈಕ್ ಗೆಲ್ಲುವ ಅವಕಾಶವಿದೆ. ಬಂಪರ್ ಡ್ರಾದಲ್ಲಿ ಸ್ಕೋಡಾ ಕುಶಾಕ್ ಕಾರು, ಸ್ಕೂಟರ್ ಹಾಗೂ 40 ಗ್ರಾಂ ಚಿನ್ನದ ಬಹುಮಾನಗಳು ಸೇರಿವೆ. ವಾರದ ಡ್ರಾದಲ್ಲಿ ಪ್ರತಿ ವಾರ 8 ಗ್ರಾಂ ಚಿನ್ನದ ನಾಣ್ಯ ಹಾಗೂ ದೈನಂದಿನ ಡ್ರಾದಲ್ಲಿ ಪ್ರತಿದಿನ 1 ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಬಿಂದು ಜುವೆಲ್ಲರಿ ತನ್ನ 40 ವರ್ಷಗಳ ಪರಂಪರೆ, ಗುಣಮಟ್ಟದ ಆಭರಣಗಳು ಮತ್ತು ಗ್ರಾಹಕರ ವಿಶ್ವಾಸದೊಂದಿಗೆ ಮಂಗಳೂರಿನ ಗ್ರಾಹಕರಿಗೆ ವಿಶೇಷ ಶಾಪಿಂಗ್ ಅನುಭವ ಒದಗಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

