ಮುಸ್ಲಿಂ ಲೀಗ್ ಆರೋಪ ಕೈಲಾಗದವನ ಮೈ ಪರಚಿದಂತೆ -ಬಿಜೆಪಿ

ಮಂಜೇಶ್ವರ :ದೇಶದ ಪ್ರಧಾನಿ ನರೇಂದ್ರ ಮೋದಿ ಯವರ ಕರೆಗೆ ಓಗೊಟ್ಟು ಸೇವಾ ಸಂಕಲ್ಪ ಅಭಿಯಾನದ ಭಗವಾಗಿ ಬಿಜೆಪಿ ವತಿಯಿಂದ ದೇಶದಲ್ಲಿ ಪೌರ ಕಾರ್ಮಿಕರ ಸನ್ಮಾನ, ಅಂಗನವಾಡಿ ಟೀಚರ್ಸ್, ಸಹಾಯಕಿಯರು, ಆಶಾ ಕಾರ್ಯಕರ್ತರು, ಹರಿತ ಕರ್ಮ ಸೇನೆ ಕಾರ್ಮಿಕರ ಸೇವಾ ಕಾರ್ಯವನ್ನು ಗೌರವಿಸುವ ಬಿಜೆಪಿ ಕಾರ್ಯಕ್ರಮ ವನ್ನು ಮುಸ್ಲಿಂ ಲೀಗ್ ವಿರೋಧ ವ್ಯಕ್ತ ಪಡಿಸುವುದು ಕೈಲಾಗದವ ಮೈ ಪರಚಿದಂತೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಮುಸ್ಲಿಂ ಲೀಗ್ ನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಸರ್ಕಾರಿ ಸೌಲಭ್ಯ ಪಡೆಯುವರನ್ನು ವೇತನ ಪಡೆಯುವ ರನ್ನು, ಬಿ ಎಲ್ ಓ ಗಳನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಳಸುತಿದೆ ಎಂಬ ಆರೋಪ ಹಾಸ್ಯಸ್ಪದ ಎಂದು ಆದರ್ಶಲೇವಡಿ ಮಾಡಿದರು ಯಾಕೆಂದರೆ.. ಕೇರಳ SIR ಪ್ರಕ್ರಿಯೆ ಯ ಮುಖ್ಯಸ್ಥರು ಕಳೆದ ಚುನಾವಣೆಯ ಕೇರಳ ಉಸ್ತುವಾರಿ ಆಗಿದೆ ರತನ್ ಕೇಳ್ಕರ್ ಎಂಬ ಚುನಾವಣಾ ಅಧಿಕಾರಿಯನ್ನು ಗೆದ್ದ ಬಳಿಕ ಮುಖ್ಯಮಂತ್ರಿ ಗಳ ಪರ್ಸನಲ್ ಕಾರ್ಯದರ್ಶಿ ಮಾಡಿದ ಯೂ ಡಿ ಏಫ್ ಅಥವಾ ಮುಸ್ಲಿಂ ಲೀಗ್ ನಿಂದ ಬಿಜೆಪಿ ಕಲಿಯಬೇಕಾದದ್ದು ಇಲ್ಲ ಎಂದು ಆದರ್ಶ ಹೇಳಿದರು.

ಸಮಾಜದ ಉನ್ನತಿಗಾಗಿ, ಶ್ರಮಿಸುವ ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ಮಕ್ಕಳ ಪೋಷಣೆ ಮಾಡುವ ಸಹಾಯಕಿ ಯರು, ಸ್ವಚ್ಛತೆ ಮಾಡುವ ಹರಿತ ಕರ್ಮ ಕಾರ್ಮಿಕರು ಪೌರ ಕಾರ್ಮಿಕರ ಸೇವೆ ಯನ್ನು ಗುರುತಿಸಿ ಬಿಜೆಪಿ ಅವರನ್ನು ಸನ್ಮಾನಿಸುತಿದೆ.. ಎಂದು ವಿವರಿಸಿದರು.
ಕೇರಳ ದಲ್ಲಿ ಬೇಡಿಕೆ ಈಡೇರಿಕೆಗಾಗಿ 2ವರ್ಷ ಕೇರಳ ವಿಧಾನಸಭಾ ಮುಂಭಾಗ ಧರಣಿ ಕುಳಿತ ಆಶಾ ಕಾರ್ಯಕರ್ತರು ಗಳನ್ನು ಸೌಜನ್ಯ ಕಾದರು ಭೇಟಿ ಆಗದ ಮುಸ್ಲಿಂ ಲೀಗ್ ಶಾಸಕರುಗಳು ಯಾವ ನೈತಿಕತೆಯಿಂದ ಅಧಿಕಾರ ದಲ್ಲಿ ಇರುವುದು, ಎಂದು ಬಿಜೆಪಿ ಪ್ರಶ್ನೆಸಿದೆ…
ಸಮಾಜಮುಖಿ ಕೆಲಸ ಮಾಡುವ ಸಾಮಾನ್ಯ ಜನರನ್ನು ಗೌರವಿಸಿವುದು ಮುಸ್ಲಿಂ ಲೀಗ್ ಗೆ ಕಾಣಲು ಆಗುವುದಿಲ್ಲ, ಮುಸ್ಲಿಂ ಲೀಗ್ ಬಿಜೆಪಿ ವಿರುದ್ಧ ಚುನಾವಣಾ ಇಲಾಖೆ ಗೆ ದೂರು ನೀಡಿರುವುದು.

SHARE
Loading spinner

One thought on “ಮುಸ್ಲಿಂ ಲೀಗ್ ಆರೋಪ ಕೈಲಾಗದವನ ಮೈ ಪರಚಿದಂತೆ -ಬಿಜೆಪಿ”

Leave a Reply

Your email address will not be published. Required fields are marked *

error: Content is protected !!