
ಕಾಸರಗೋಡು: ವಿಜಯದಶಮಿ ಪ್ರಯುಕ್ತ ಜೀವನ್ ಜ್ಯೋತಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾಸರಗೋಡು ಶಾಖೆಯಲ್ಲಿ ಗಣಪತಿ ಹೋಮ ನೆರವೇರಿತು.ಮಂಜುನಾಥ ಹೆಗ್ಡೆ ಅವರ ನೇತೃತ್ವದಲ್ಲಿ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ಹೋಮ ನಡೆಯಿತು.





ಕಾರ್ಯಕ್ರಮದಲ್ಲಿ ಸೊಸೈಟಿಯ ಮಂಗಳೂರು ಶಾಖೆಯ ಸೀನಿಯರ್ ಮ್ಯಾನೇಜರ್ ಆಶ್ರಿತ ಶೆಟ್ಟಿ, ಕೋ-ಆರ್ಡಿನೇಟರ್ ಭಾಸ್ಕರ ಕೆ ,ಪ್ರಮುಖರಾದ ಸುರೇಶ ನಾಯ್ಕ್ ಕಾಸರಗೋಡು , ತಾರಾನಾಥ ಗಂಗೆ, ಗಣೇಶ್ ಪ್ರಸಾದ್, ಶ್ರೀಮತಿ ಶೋಭಾ, ಉದಯ ಪಿ., ಸುರೇಶ, ನಾರಾಯಣ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



