
ಬದಿಯಡ್ಕ : ಇಲ್ಲಿಯ ಜಂಕ್ಷನ್ ನಲ್ಲಿ ವಾಹನ ನಿಲುಗಡೆ ವಿಚಾರವಾಗಿ ಉಂಟಾದ ವಾಗ್ವಾದವು ಉದ್ವಿಗ್ನಗೊಂಡು ಹೊಡೆದಾಟದಲ್ಲಿ ಅಂತ್ಯಗೊಂಡಿದೆ.
ಈ ಸಂಬಂಧ ಬದಿಯಡ್ಕ ಪೊಲೀಸರು ಪರಸ್ಪರ ದೂರು-ಪ್ರತಿದೂರುಗಳ ಆಧಾರದ ಮೇಲೆ ಒಟ್ಟು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ತಿಂಗಳ 17ರಂದು ಸಂಜೆ ಅಬ್ದುಲ್ಲ ಕುಂಞ ಹಾಗೂ ಗಿರೀಶ್ ಎಂಬುವವರ ನಡುವೆ ವಾಹನ ನಿಲುಗಡೆ ವಿಷಯಕ್ಕೆ ಮಾತಿನ ಚಕಮಕಿ ನಡೆದು ಕೈಕೈಮಲಕ ಹಂತಕ್ಕೆ ತಲುಪಿದೆ.

ಜಗಳ ಬಿಡಿಸಲು ಹೋದವರಂತೆ ನಟಿಸಿ ಮತ್ತಷ್ಟು ಮಂದಿ ಗಿರೀಶ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಆರಂಭದಲ್ಲಿ ಒಂದು ಕಡೆಯಿಂದ ದೂರು ದಾಖಲಾಗಿದ್ದರೂ, ಬಳಿಕ ಗಿರೀಶ್ ಅವರು ಡಿವೈಎಸ್ಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.


