
ಮಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಟ ಅರ್ಚನಾ (35) ಅವರು ಮನೆಗೆ ವಾಪಸಾಗದೆ ಸೆಪ್ಟೆಂಬರ್ 17ರಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ರಾಘವೇಂದ್ರ (42) ಎಂಬವರೊಂದಿಗೆ ತೆರಳಿರುವುದಾಗಿ ತಿಳಿದುಬಂದಿದೆ.

ನಾಪತ್ತೆಯಾದ ಅರ್ಚನಾ ಅವರ ಎತ್ತರ ಸುಮಾರು 5 ಅಡಿ ಇದ್ದು, ದುಂಡು ಮುಖ, ದಪ್ಪ ಶರೀರ ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾರೆ. ನಾಪತ್ತೆಯಾದ ದಿನ ಬಿಳಿ ಬಣ್ಣದ ಚುಕ್ಕೆಗಳಿರುವ ಚೂಡಿದಾರ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


