ವಿದ್ಯಾರಂಗ ಸೃಜನೋತ್ಸವದಲ್ಲಿ ಸೂರಂಬೈಲು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸೂರಂಬೈಲು: ಕುಂಬಳೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಸೃಜನೋತ್ಸವದಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

AMRITHA K

DHANUPRIYA M

MRIDULA

NIKHITHA

SANUSHA

ಹೈಸ್ಕೂಲ್ ವಿಭಾಗದ ಕನ್ನಡ ಕಾವ್ಯಾಲಾಪನೆಯಲ್ಲಿ ಅಮೃತ ಕೆ., ಕನ್ನಡ ಕವಿತಾ ರಚನೆಯಲ್ಲಿ ಧನುಪ್ರಿಯ ಎಂ., ಜಾನಪದ ಗೀತೆಯಲ್ಲಿ ನಿಖಿತ ಹಾಗೂ ಕಾವ್ಯಾಲಾಪನೆಯಲ್ಲಿ ಸನೂಷ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇನ್ನು ಯುಪಿ ವಿಭಾಗದ ಕಾವ್ಯಾಲಾಪನೆಯಲ್ಲಿ ಮೃದುಲ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!