

ಸೌದಿ ಅರೇಬಿಯಾ : ಉಮ್ರಾಯಾತ್ರೆಗೆ ತೆರಳಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಯಾತ್ರಿಕರಿಗೆ ಅನಿವಾಸಿ ಭಾರತೀಯರಾದ ಎ,ಐ,ಕೆ,ಎಂ,ಸಿ,ಸಿ ನಾಯಕರು ಮತ್ತು ಕಾರ್ಯಕರ್ತರು ನೆರವಿಗೆ ಧಾವಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುತ್ತಾರೆ.

ಸಾವಿರಾರು ಮಂದಿ ಉಮ್ರಾ ಯಾತ್ರಿಕರು ಊರಿಗೆ ಮರಳುವ ಸಂದರ್ಭದಲ್ಲಿ ಜಿದ್ದಾ, ದಮ್ಮಾಮ್ ಹಾಗೂ ಇತರ ವಿಮಾನ ನಿಲ್ದಾಣಗಳಲ್ಲಿ ವಿಮಾನ ರದ್ದಾದ ಕಾರಣ ಅನಿರೀಕ್ಷಿತ ತೊಂದರೆ ಎದುರಾಗಿದೆ, ಪ್ರಾಯಸ್ಥರು ಮತ್ತು ಸಣ್ಣಪುಟ್ಟ ಮಕ್ಕಳನ್ನು ಹಿಡಿದು ಸಂಕಷ್ಟದಲ್ಲಿರುವ ತಾಯಂದಿರು, ಅನಾರೋಗ್ಯವಂತ ವಯಸ್ಕರು ತೀವ್ರ ಸಮಸ್ಯೆಯಲ್ಲಿರುವಾಗ ಅಲ್ಲಿರುವ.K.M.C.C ಕಾರ್ಯಕರ್ತರು,ಅನಿವಾಸಿ ಭಾರತೀಯ ಸಹೋದರರು ನೆರವಿಗೆ ಧಾವಿಸಿ, ಔಷಧಿ,ಊಟ, ಸ್ನಾನ, ವಸತಿ ಮತ್ತು ವಿಶ್ರಾಂತಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದ ಮಾನವೀಯ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


