ಹಕ್ಕುಪತ್ರ ಸಿಕ್ಕರೂ ಜಮೀನು ಪತ್ತೆಯಿಲ್ಲ! ಕಂದಾಯ ಅಧಿಕಾರಿಗಳ ವಿರುದ್ಧ ಇರ್ಷಾದ್ ಚಾಕೋ ಆಕ್ರೋಶ

​ಕುಂಬಳೆ: ಕೊಯಿಪ್ಪಾಡಿ ಗ್ರಾಮದಲ್ಲಿ ಸರಕಾರ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದರೂ, ನಿಖರವಾದ ಸ್ಥಳ ಪತ್ತೆಯಾಗದ ಹಿನ್ನೆಲೆಯಲ್ಲಿ ನಿವಾಸಿ ಇರ್ಷಾದ್ ಚಾಕೋ ಕಂದಾಯ ಅಧಿಕಾರಿಗಳ ವಿರುದ್ಧ ಮುಷ್ಕರಕ್ಕೆ ಮುಂದಾಗಿದ್ದಾರೆ.

ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರ ಕುಟುಂಬವು ಸ್ವಂತ ಮನೆಗಾಗಿ ಅರ್ಜಿ ಸಲ್ಲಿಸಿ ಪಟ್ಟಾ ಪಡೆದಿತ್ತು. ಆದರೆ ಪಟ್ಟಾ ಹಾಗೂ ಸ್ಕೆಚ್‌ನಲ್ಲಿರುವ ಸರ್ವೆ ನಂಬರ್‌ಗಳಲ್ಲಿ ವ್ಯತ್ಯಾಸವಿರುವುದು ತನಿಖೆಯಿಂದ ತಿಳಿದುಬಂದಿದೆ.

ನಂತರ ತಾಲೂಕು ಕಚೇರಿಯಲ್ಲಿ ತಿದ್ದುಪಡಿ ಮಾಡಲಾಗಿದ್ದರೂ, ಇದುವರೆಗೂ ಜಮೀನನ್ನು ಅಳತೆ ಮಾಡಿ ಗಡಿ ಗುರುತಿಸಿಕೊಟ್ಟಿಲ್ಲ. ಮೂರು ದಿನಗಳೊಳಗೆ ಜಮೀನು ಅಳೆದು ಗಡಿ ನಿರ್ಣಯಿಸಿಕೊಡದಿದ್ದರೆ ವಿಲ್ಲೇಜ್ ಅಥವಾ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಇರ್ಷಾದ್ ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!