ಬಾಲಕನಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ 17 ವರ್ಷ ಕಠಿಣ ಜೈಲು ಶಿಕ್ಷೆ

ಕಾಸರಗೋಡು : ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿದ್ದು, 2015ರ ಅಕ್ಟೋಬರ್ 28ರಂದು 15 ವರ್ಷದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 17 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1,25,000 ರೂಪಾಯಿ ಜುಲ್ಮಾನೆ ವಿಧಿಸಿ ಆದೇಶಿಸಿದೆ.

​ಕಾಸರಗೋಡು ತೆರುವತ್ ಸಿರಾಮಿಕ್ಸ್ ರಸ್ತೆಯ ಪಾಂಗೋಡ್ ಹೊಸಿನ ಶಿವಕುಮಾರ್ ಅಲಿಯಾಸ್ ಮುನ್ನ (34) ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಒಂದು ವೇಳೆ ದಂಡದ ಮೊತ್ತ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಕೆ. ಸಂತೋಷ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

​ಈ ಪ್ರಕರಣದ ತನಿಖೆಯನ್ನು ಮೆಲ್ವಿನ್ ಜೋಸ್, ಅಬ್ದುಲ್ ರಹೀಮ್ ಹಾಗೂ ಪಿ. ರಾಜೇಶ್ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪ್ರಿಯ ಎಂ.ಕೆ. ವಾದ ಮಂಡಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!