
ಕಾಸರಗೋಡು : ಬೇಡಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹದಿನೇಳರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆ ವರದಿಗೆ ಸಂಬಂಧಿಸಿ ಮುಳ್ಳೇರಿಯ ನಿವಾಸಿಯಾದ 18 ವರ್ಷದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಳೆದ ಸೆಪ್ಟೆಂಬರ್ನಲ್ಲಿ ಯುವಕ ಬಾಲಕಿಯ ಮನೆಗೆ ತೆರಳಿ ಕೃತ್ಯವೆಸಗಿದ್ದನೆಂದು ಆರೋಪಿಸಲಾಗಿದೆ.ಇತ್ತೀಚೆಗೆ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ವೈದ್ಯರ ಸುಳಿವಿನ ಮೇರೆಗೆ ಹಾಗೂ ಬಾಲಕಿಯ ಹೆತ್ತವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

