ಹೊಸದುರ್ಗದ ಪುಲ್ಲೂರು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಭಾರಿ ಕಳವು

ಕಾಸರಗೋಡು : ಹೊಸದುರ್ಗದ ಪುಲ್ಲೂರು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಭಾರಿ ಕಳವು ನಡೆದಿದೆ.

ಮಂಗಳವಾರ ಕೃತ್ಯ ಬೆಳಕಿಗೆ ಬಂದಿದ್ದು, ಗೇಟ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಭಂಡಾರವನ್ನು ಒಡೆದು ಅದರಲ್ಲಿದ್ದ ಅಂದಾಜು ರೂ.15,000 ನಗದನ್ನು ದೋಚಿದ್ದಾರೆ.

ಕ್ಷೇತ್ರ ಟ್ರಸ್ಟಿ ಬಿ. ಗಂಗಾಧರನ್ ಅಂಬಲತ್ತರ ನೀಡಿದ ದೂರಿನನ್ವಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!