ಕುಂಬಳೆ ಪಂಚಾಯತ್‌ನಲ್ಲಿ ₹81.36 ಲಕ್ಷದ ಬೀದಿ ದೀಪ ಯೋಜನೆಯಲ್ಲಿ ಅಕ್ರಮ ಆರೋಪ!

​ಕುಂಬಳೆ : ಕುಂಬಳೆ ಪಂಚಾಯತ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಂಡ ಬೆನ್ನಲ್ಲೇ, ರೂ. 81.36 ಲಕ್ಷ ವೆಚ್ಚದ ಬೀದಿ ದೀಪ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ವಿಪಕ್ಷ ಬಿಜೆಪಿ ಮತ್ತು ಸಿಪಿಎಂ ವಾರ್ಡ್‌ಗಳಿಗೆ ಒಂದೂ ದೀಪ ನೀಡದೆ, ಆಡಳಿತಾರೂಢ ಮುಸ್ಲಿಂ ಲೀಗ್ ವಾರ್ಡ್‌ಗಳಿಗೆ 60ಕ್ಕೂ ಹೆಚ್ಚು ದೀಪಗಳನ್ನು ನೀಡಿ ಪಕ್ಷಪಾತ ಎಸಗಲಾಗಿದೆ ಎಂದು ವಿಕ್ರಂ ಪೈ ದೂರಿದ್ದಾರೆ.

​ಮಾರುಕಟ್ಟೆಯಲ್ಲಿ ರೂ.600 ಗೆ ಸಿಗುವ 35 ವಾಟ್ಸ್ ಬಲ್ಬ್‌ಗಳನ್ನು ಪಂಚಾಯತ್ ತಲಾ ರೂ . 4,600 ನೀಡಿ ಖರೀದಿಸಿದೆ. ಅಲ್ಲದೆ, ಹೆದ್ದಾರಿ ಕಾಮಗಾರಿ ವೇಳೆ ತೆರವುಗೊಳಿಸಿದ್ದ ಹಳೆಯ ದೀಪಗಳಿಗೆ ಬಣ್ಣ ಬಳಿದು ಹೊಸ ಪಟ್ಟ ಕಟ್ಟಲಾಗಿದೆ.

3 ವರ್ಷಗಳ ವಾರಂಟಿ ಅವಧಿಯಲ್ಲಿದ್ದರೂ ದುರಸ್ತಿಗೆ ಲಕ್ಷಾಂತರ ರೂ. ವ್ಯಯಿಸಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಜನಪ್ರತಿನಿಧಿಗಳು ಪ್ರಮಾಣವಚನ ಉಲ್ಲಂಘಿಸಿದ್ದಾರೆಂದು ದೂರಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!