” ಕಲಾ ಪರಂಪರೆಗೆ ಸಂಜಯರ ಕೊಡುಗೆ ಅನನ್ಯ”_ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ

ಧರ್ಮಗಳನ್ನು ರೂಢಿಸಿಕೊಂಡು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಉದ್ದೀಪನಗೊಳಿಸುವಂತಹವುಗಳು. ಯಕ್ಷಗಾನವು ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಅಂತಹಾ ಕಲೆಯನ್ನು ಆರಾಧಿಸುತ್ತಾ ಬಂದವರು ನಮ್ಮ ತಂದೆಯವರಾದ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರು. ಅವರ ಸಂಸ್ಮರಣೆಯನ್ನು ಕಳೆದ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇದ್ದಾರೆ. ಗೋಣಿಬೀಡು ಸಂಜಯ ಕುಮಾರ್ ಶೆಟ್ಟಿಯವರ ಕಲಾರಾಧನೆ ಅನನ್ಯವಾದುದು. ತಂದೆಯವರ ನೆನಪಿನಲ್ಲಿ ‘ಅಸ್ರಣ್ಣ ಗೌರವ ಪ್ರಶಸ್ತಿ’ಯ ಸಹಿತ ಅನೇಕ ಕಲಾಗೌರವಸಹಿತ ಸ ನ್ಮಾನಗಳನ್ನು ನಡೆಸುತ್ತಾ ಬರುತ್ತಿರುವ ಸಂಜಯರ ಕಲಾಮಾತೆಯ ಸೇವೆ ನಿರಂತರವಾಗಿರಲಿ” – ಎಂದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮಿ ನಾರಾಯಣ ಅಸ್ರಣ್ಣರು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ನಡೆದ ಯಕ್ಷ ಪ್ರತಿಭೆ (ರಿ) ಮಂಗಳೂರು ಸಂಸ್ಥೆಯ 18ನೇ ವರ್ಷದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ವಕೀಲರಾದ ವಿಶೇಷ ಸರಕಾರಿ ಅಭಿಯೋಜಕರು, ಜಾರಿ ನಿರ್ದೇಶನಾಲಯ ಶ್ರೀ ಮಹೇಶ್ ಕಜೆಯವರು” ಸಂಜಯರ ದೃಷ್ಠಿ ಮಹಾಭಾರತದ ಸಂಜಯರಂತೆ. ಒಳಗಣ್ಣಿಂದ ಸಮಾಜವನ್ನು ಅರ್ಥವಿಸಿಕೊಂಡು ಯಕ್ಷಗಾನದ ಮೇರು ಕಲಾವಿದರನ್ನು, ಸಂಘಟಕರನ್ನು, ಉದಯೋನ್ಮುಖ ಕಲಾವಿದರನ್ನು ಗುರುತಿಸಿ, ಗೌರವಿಸುವ ಮಹಾನ್ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದಾರೆ” ಎಂದು ಹೇಳುತ್ತಾ ಆಸ್ರಣ್ಣ ಗೌರವ ಪ್ರಶಸ್ತಿಯನ್ನು ಕಲಾವಿದ, ಗುರು ಉಬರಡ್ಕ ಉಮೇಶ ಶೆಟ್ಟಿಯವರಿಗೆ ಪ್ರದಾನಿಸುತ್ತಾ ಹೇಳಿದರು. ಯಕ್ಷ ಪ್ರತಿಭೆದಿನ ಕಾರ್ಯಾಧ್ಯಕ್ಷರೂ, ಪ್ರಧಾನ ಸಂಚಾಲಕರೂ ಆದ ಗೋಣಿಬೀಡು ಸಂಜಯ ಕುಮಾರ್ ಶೆಟ್ಟಿಯವರು ತಾನು ಹೇಗೆ ಗೋಪಾಲಕೃಷ್ಣ ಆಸ್ರಣ್ಣರಿಂದ ಪ್ರಭಾವಿತನಾದೆ ಎಂಬುದನ್ನು ಪ್ರಸ್ತಾವಿಸುತ್ತಾ ಸ್ವಾಗತ ಪರಿಚಯ ನಡೆಸಿಕೊಟ್ಟರು.


ಸಭಾಧ್ಯಕ್ಷರಾಗಿ ಭಾಜಪಾದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುದರ್ಶನ್ ಮಾಡಬಿದಿರೆ ಸಭಾದ್ಯಕ್ಷತೆವಹಿಸಿದ್ದರು. ಅದಾನಿ ಗ್ರೂಪ್ಸ್ ನ ಕಿಶೋರ್ ಆಳ್ವ, ಚಿತ್ತರಂಜನ್ ಬೋಳಾರ, ಮಂಗಳಾದೇವಿ ದೇವಸ್ಥಾನದ ಮುಕ್ತೇಸರರಾರ ಅರುಣ್‌ ಐತಾಳ್, ಮೂಡಬಿದ್ರೆಯ ಶ್ರೀಪತಿ ಭಟ್, ಡಾ.ಹರಿಕೃಷ್ಟ ಪುನರೂರು, ಉದ್ಯಮಿ ಸಿ.ಯಸ್. ಭಂಡಾರಿ, ವಕೀಲರಾದ ಸದಾಶಿವ ಐತಾಳ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷ ಸಂಘಟಕ ಶರತ್ ಕುಮಾರ್, ಕದ್ರಿ, ರಂಜಿತ್ ಮಂಗಳಾದೇವಿ, ಅರ್ಷಿಯಾ ಖಾನ್, ಯುವ ಕಲಾವಿದೆ ವಾರುಣೀ ನಾಗರಾಜ ಆಚಾರ್ಯರಿಗೆ ಗೌರವ ಪ್ರಶಸ್ತಿಗಳು ಸಂದುವು.
ಸುಧಾಕರ ರಾವ್, ಪೇಜಾವರರು ಸನ್ಮಾನಿತರ ಅಭಿನಂದನೆ ಹಾಗೂ ಆ ಸ್ರಣ್ಣರ ಸಂಸ್ಮರಣೆ ನಡೆಸಿಕೊಟ್ಟರು.ಯಕ್ಷ ಗುರು, ಸಂಘಟಕ ವರ್ಕಾಡಿ ರವಿ ಅಲೆವೂರಾಯರು ನಿರೂಪಿಸಿದರು. ಶ್ರೀಮತಿ ಪ್ರಪುಲ್ಲಾ ಯಸ್.ಶೆಟ್ಟಿ ಧನ್ಯವಾದವಿತ್ತರು. ಎರ್ಮಾಳ್ ಅಶೋಕ್ ಶೆಟ್ಟಿ, ಸುಜಾತಾ ಆಳ್ವ, ಪ್ರಸನ್ನ ಕುಮಾರ್ ಶೆಟ್ಟಿ, ಮನೋಹರ, ಶೀಧರ ಸುವರ್ಣ, ಅಭಿ, ತೀಕ್ಷ್ಣ, ನೀಹಾರ್, ಪರಮೇಶ್, ಸಹಕಾರವಿತ್ತರು. ಬಳಿಕ ಖ್ಯಾತ ಕಲಾವಿದರ ಕೂಡುವಿಕೆಯಿಂದ ಸಂಜಯ ಕುಮಾರರೇ ಪ್ರಮುಖ ಪಾತ್ರ ವಹಿಸಿದ” ಶ್ರೀಕೃಷ್ಣ ಲೀಲಾಮೃತ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!