ಬೇರೆ ಪಕ್ಷಕ್ಕೆ ಹೋಗ್ಲಿಕ್ಕೆ ನಮಗೆ ಪಕ್ಷ ಇಲ್ವ ಅಂತಾ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಪ್ರಶ್ನಿಸಿದ್ದಾರೆ. ಮಂಗಳೂರಲ್ಲಿ ಪತ್ರಕರ್ತರು ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗ್ತೀರಾ ಎಂದು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರ ನೀಡಿದ್ರು. ಇಡೀ ದೇಶವನ್ನೇ ಬಿಜೆಪಿ ಆಳುತ್ತಿದೆ. ಅಂತಹ ಪಕ್ಷದಲ್ಲಿ ನಾನು ಇರುವಾಗ ಬೇರೆ ಪಕ್ಷಕ್ಕೆ ಹೋಗುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು. ಪಕ್ಷಾಂತರ ಮಾಡುವ ಜಾಯಮಾನ ನನ್ನದಲ್ಲ. ಅಂತಹ ಅವಶ್ಯಕತೆ ನಮಗೆ ಏನಿದೆ ಎಂದು ಪ್ರಶ್ನಿಸಿದ ಪಾಲೇಮಾರ್, ನನ್ನ ಚಟುವಟಿಕೆ ಇರುವಾಗ ಸಕ್ರಿಯದ ಪ್ರಶ್ನೆ ಎಲ್ಲಿ ಬರುತ್ತೆ ಅಂದರು. ಇನ್ನು ಕಾಂಗ್ರೆಸ್ ನಲ್ಲಿ ನನಗೆ ಬಹಳಷ್ಟು ಮಿತ್ರರಿದ್ದಾರೆ.

ಅವರು ಬರುತ್ತಾರೆ, ಮಾತನಾಡ್ತಾರೆ, ಜತೆಯಾಗಿ ಊಟ ಮಾಡ್ತೇವೆ ಎಂದ ಅವರು, ಪಕ್ಷದ ನಿಷ್ಠೆ ಬಂದಾಗ ಪಕ್ಷ ಬೇರೆ ಬೇರೆ ಅಂತಾ ಸ್ಪಷ್ಟನೆ ನೀಡಿದರು.

