
ಕುಂಬಳೆ: ಯುವಜನತೆಯಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಎಸ್.ಕೆ. ಎಸ್ ಎಸ್ ಎಫ್ ಅಡ್ಕ ಘಟಕದ ವತಿಯಿಂದ ನವೆಂಬರ್ 8ರಂದು ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಕುಂಬಳ ಪ್ರೆಸ್ ಫೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯುವಜನತೆಗೆ ಇಸ್ಲಾಂ ಹೇಳುವುದೇನು?’ ಎಂಬ ವಿಷಯದಡಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾತ್ರಿ 7 ಗಂಟೆಗೆ ಸಯ್ಯಿದ್ ಕೆ.ಎಸ್. ಮೊಹಮ್ಮದ್ ಶಮೀಂ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ಧಾರ್ಮಿಕ ವಿದ್ವಾಂಸ ಸಿಂಸಾರುಲ್ ಹಖ್ ಹುದವಿ ಅಬುಧಾಬಿ ಮುಖ್ಯ ಭಾಷಣ ಮಾಡಲಿದ್ದಾರೆ.

ಮಾದಕ ವಸ್ತುಗಳ ಬಳಕೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ನೈತಿಕ ಮೌಲ್ಯಗಳ ಕುಸಿತ ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಿರುವ ಯುವಜನತೆಯಲ್ಲಿ ಧಾರ್ಮಿಕ ಮತ್ತು ನೈತಿಕ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಸಿ.ಎ., ಪ್ರಧಾನ ಸಂಚಾಲಕ ಒ.ಕೆ. ಇಬ್ರಾಹಿಂ, ಕಾರ್ಯಾಧ್ಯಕ್ಷ ಫೈಝಲ್ ಭಾರಿಮಿ, ಖಜಾಂಚಿ ಅಬ್ದುರ್ರಹ್ಮಾನ್ ಹಾಜಿ ಬಂಡಸಾಲ, ಮಹ್ಮೂದ್ ಮುತ್ತಂ ಹಾಗೂ ಮೊಯ್ದೀನ್ ಚೆಂಗಲ್ ಉಪಸ್ಥಿತರಿದ್ದರು.

