ಸಾನಿಧ್ಯ ಸಂಸ್ಥೆಯಲ್ಲಿ ನ.7ರಂದು ದೀಪಾವಳಿ ಸಂಭ್ರಮ

ಮಂಗಳೂರು: ಶಕ್ತಿನಗರದ ಶ್ರೀ ಗಣೇಶ ಸೇವಾ ಟ್ರಸ್ಟ್ ಫಾರ್ ಎಕ್ಸೆಪ್ಷನಲ್ ಪರ್ಸನ್ಸ್ (ರಿ.) ಇದರ ಸೇವಾ ಯೋಜನೆಯಾದ ಸಾನಿಧ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ನವೆಂಬರ್ 7ರಂದು ದೀಪಾವಳಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಸಂಜೆ 6.30ಕ್ಕೆ ಶಕ್ತಿನಗರದ ಸಾನಿಧ್ಯ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಜಯಲಕ್ಷ್ಮಿ (ಕೆ ಎ ಎಸ್ ) ಉದ್ಘಾಟಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೊಮ್ಮರಡ್ಡಿ (ಕೆಎಸ್‌ಪಿಎಸ್) ಮುಖ್ಯ ಅತಿಥಿಯಾಗಿ ಹಾಗೂ ಇನ್‌ಲ್ಯಾಂಡ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

2003ರಿಂದ ವಿಶೇಷಚೇತನರ ಸೇವೆ ಹಾಗೂ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಸಾನಿಧ್ಯ ಸಂಸ್ಥೆಯ ಟ್ರಸ್ಟಿಗಳು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿಶೇಷ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಮಕ್ಕಳ ಪೋಷಕರು, ಹೆತ್ತವರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ವತಿಯಿಂದ ಆಹ್ವಾನಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!