ಕೇಕ್‌ಗಳಲ್ಲಿ ಹಾನಿಕಾರಕ ಬಣ್ಣ ಬಳಕೆ ತಡೆಗೆ ಆಹಾರ ಸುರಕ್ಷತಾ ಇಲಾಖೆ ದಾಳಿ

ಸುರತ್ಕಲ್ : ಮಾನ್ಯ ಆರೋಗ್ಯ ಸಚಿವರಾದ ಶ್ರೀಯುತ ಯುಟಿ ಖಾದರ್ ರವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಇವರ ತಂಡದಿಂದ ಕ್ಲೌಡ್ ಕಿಚನ್ ಮತ್ತು ಸೆಂಟ್ರಲ್ ಕೇಕ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಗಳಿಂದ ಕೇಕ್ ಗಳು ಐಸ್ ಕ್ರೀಮ್ ಗಳು ಸರಬರಾಜು ಮಾಡಿ ಮಾರಾಟ ಮಾಡುತ್ತಿರುವ ರಿಬ್ಬನ್ಸ್ ಅಂಡ್ ಬಲೂನ್ಸ್, hive ಫ್ರಾನ್ಚೈಸಿ ಯೂನಿಟ್ ಗಳಲ್ಲಿ ಪರಿಶೀಲನಾ ಭೇಟಿ ನಡೆಸಲಾಯಿತು.

ಸುರತ್ಕಲ್ ವ್ಯಾಪ್ತಿಯಲ್ಲಿ ತೀವ್ರತರವಾದ ಪರಿಶೀಲನೆ ನಡೆಸಿ ಕೇಕ್ ಗಳಲ್ಲಿ ಬಳಸಲಾಗುತ್ತಿರುವ ಕಲರ್ ಗಳ ಬಗ್ಗೆ ಪ್ರಯೋಗಾಲಗಳಲ್ಲಿ ಪರೀಕ್ಷೆ ನಡೆಸಲು ಮಾದರಿಗಳನ್ನು ಸಂಗ್ರಹಿಸಲಾಯಿತು

ಕೇಕುಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ಹಾನಿಕರಕವಾದ ಬಣ್ಣಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
ಹಬ್ಬದ ಸಂದರ್ಭಗಳಲ್ಲಿ ತಯಾರಿಸಲಾಗುವ ಸಿಹಿ ತಿಂಡಿಗಳಲ್ಲಿ ಕಲರ್ ಬಳಸದಂತೆ ಗುಣಮಟ್ಟದ ಶುಚಿಯಾದ ರೀತಿಯಲ್ಲಿ ತಯಾರಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!