ಹೊಲದ ಬದುವಿನಲ್ಲಿ ಎತ್ತು ಅತ್ತಿತ್ತು,
ಅದರ ನೋವು ನಾಯಿ ಕಿವಿಗೆ ಬಿತ್ತು,
ನಾಯಿಯಿಂದ ಕುದುರೆಗೆ, ಕುದುರೆಯಿಂದ ಹಂದಿಗೆ,
ಹೋದಂತೆಲ್ಲ ಕಥೆ ಬೆಳೆದು ನಿಂತಿತು ದಂಡಿಗೆ.

ನಿನ್ನದೊಂದು ಸಣ್ಣ ನಿಟ್ಟುಸಿರು,
ಇನ್ನೊಬ್ಬನ ಬಾಯಲ್ಲಿ ಬೆಂಕಿಯ ಉಸಿರು,
ನಿನ್ನ ಮನದ ಗುಟ್ಟು ಹಂಚಿದ ಕ್ಷಣ,
ಅದು ನಿನ್ನದಲ್ಲ, ಊರಿನ ಕಥನ.
ಮನಸ್ಸು ಒಂದು ಬಾವಿ, ಆಳವಾಗಿರಲಿ,
ಮಾತು ಒಂದು ನೀರು, ಅಳೆದು ಬರಲಿ,
ಎಲ್ಲರಿಗೂ ಹಂಚಿದರೆ ಬಾವಿ ಬತ್ತುವುದು,
ಕೊನೆಗೆ ಬಾಯಾರಿಕೆ ನಿನಗೇ ಉಳಿಯುವುದು.

ಆಡುವ ಮೊದಲು ನೂರು ಬಾರಿ ಯೋಚಿಸು,
ನಿನ್ನ ನೆರಳಿಗೂ ಕೇಳದಂತೆ ಗುಟ್ಟು ಕಾಪಾಡು,
ಲೋಕವೆಂದರೆ ದೊಡ್ಡ ಕನ್ನಡಿ,
ನೀನು ನಕ್ಕರೆ ನಗುವುದು, ಅತ್ತರೆ ಅಣಕಿಸುವುದು.
ಮೌನವೇ ನಿನ್ನ ದೊಡ್ಡ ರಕ್ಷೆ.

✍🏻✍🏻ಫಝಾ೯ನ ಇದ್ದಿನಬ್ಬ

