ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಝುಬೇರ್ ಖಾನ್ ಕುಡ್ಲರಿಗೆ ಕರಾವಳಿ ಚಿತ್ರಕಲಾ ಚಾವಡಿಯಿಂದ ಸನ್ಮಾನ

ಕಲಾ ಕ್ಷೇತ್ರದ ಸಾಧನೆಗಾಗಿ 2026 ನೇ ಸಾಲಿನ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ.ಝುಬೇರ್ ಖಾನ್ ಕುಡ್ಲರಿಗೆ ಕರಾವಳಿ ಚಿತ್ರಕಲಾ ಚಾವಡಿ(ರಿ) ವತಿಯಿಂದ ಅಭಿನಂದಿಸಲಾಯಿತು.

ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷರಾದ ಶ್ರೀ ಕೋಟಿ ಪ್ರಸಾದ್ ಆಳ್ವ, ಗೌರವ ಅಧ್ಯಕ್ಷರಾದ ಶ್ರೀ ಗಣೇಶ್ ಸೋಮಯಜಿ, ಕಾರ್ಯದರ್ಶಿ ಡಾ| ಜಯಪ್ರಕಾಶ್,ಕಲಾವಿದರಾದ ಶರತ್ ಹೋಳ್ಳ, ಜಾನ್ ಚಂದ್ರನ್, ಪುಣಿಕ್ ಶೆಟ್ಟಿ ಉಪಸ್ಥಿತರಿದ್ದರು.

ಕಲಾವಿದ ಡಾ. ಝುಬೇರ್ ಖಾನ್ ಕುಡ್ಲ ರವರು ಚಿತ್ರಕಲಾವಿದನಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ .ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಮೆಚ್ಚುಗೆ ಪತ್ರ ಪಡೆದಿರುವ ಇತರು ರಾಜಾ ರವಿವರ್ಮ ಅಂತರಾಷ್ಟ್ರೀಯ ಗೋಲ್ಡ್ ಮೆಡಲ್, ಎಮ್.ಎಫ್.ಹುಸೈನ್ ಅಂತರಾಷ್ಟ್ರೀಯ ಪ್ರಶಸ್ತಿ,ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ.
ರಂಗ ಸ್ವರೂಪ ತಂಡದ ಪ್ರಮುಖರಾದ ಝುಬೇರ್ ಇವರು ಪ್ರಸ್ತುತ ಪ್ರೆಸಿಡೆನ್ಸಿ ಶಾಲೆಯಲ್ಲಿ ಕಲಾಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!